ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿ ನಡೆದ ಕೆಲವೇ ಹೊತ್ತುಗಳಲ್ಲಿ ಅರುಣಾಚಲ ಸಿಎಂ ಪೆಮಾ ಖಂಡು ಅವರ ಬೆಂಗಾವಲುಕಾರಿನಲ್ಲಿ 1.8 ಕೋಟಿ ರೂಪಾಯಿ ಪತ್ತೆಯಾಗಿದ್ದು ಖಂಡು ಹಾಗೂ ಪಿಎಂ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ವಿಪಕ್ಷಗಳು ದೂರು ನೀಡಿವೆ.
ಪಸಿಘಾಟ್ ಸಮೀಪ ಮಂಗಳವಾರ ಮಧ್ಯರಾತ್ರಿ ಮುಖ್ಯಮಂತ್ರಿ ಬೆಂಗಾವಲು ಪಡೆಯ ಒಂದು ವಾಹನದಲ್ಲಿ ಈ ಹಣ ಪತ್ತೆಯಾಗಿದೆ. ಅದಕ್ಕೆ ಕೆಲವೇ ತಾಸು ಮೊದಲು ಅಲ್ಲಿ ಪ್ರಧಾನಿ ಮೋದಿ ಅವರ ರ್‍ಯಾಲಿ ನಡೆದಿತ್ತು ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.