ಕರ್ನಾಟಕ

karnataka

ETV Bharat / bharat

ಮಕ್ಕಳಿಗಾಗಿ ಲಸಿಕೆ ಪ್ರಯೋಗ.. ಸೆಪ್ಟೆಂಬರ್ ವೇಳೆಗೆ ಫಲಿತಾಂಶ- ಗುಲೇರಿಯಾ

ಭಾರತ್ ಬಯೋಟೆಕ್ ಮಕ್ಕಳಿಗಾಗಿ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಪ್ರಯೋಗದ ಫಲಿತಾಂಶಗಳು ಸೆಪ್ಟೆಂಬರ್ ವೇಳೆಗೆ ಬರುವ ಸಾಧ್ಯತೆ ಇದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

Dr Randeep Guleria
ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ

By

Published : Jul 24, 2021, 1:28 PM IST

Updated : Jul 24, 2021, 6:44 PM IST

ನವದೆಹಲಿ:ಕೊರೊನಾದ ಹೊಸ ರೂಪಾಂತರಗಳಿಗೆ ಅಭಿವೃದ್ಧಿಪಡಿಸಿದ ಲಸಿಕೆಯ ಅವಶ್ಯಕತೆ ಇದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ಕೋವಿಡ್‌ನ ಹೊಸ ರೂಪಾಂತರಗಳಿಗೆ ಬೂಸ್ಟರ್ ಶಾಟ್ಸ್/ಡೋಸ್ (ಪರಿಣಾಮಕಾರಿ ಡೋಸ್​)​​ ಬೇಕಾಗಬಹುದು. ಸಮಯ ಕಳೆದಂತೆ ರೋಗನಿರೋಧಕ ಶಕ್ತಿ ಕುಸಿಯುತ್ತದೆ, ಹಾಗಾಗಿ ಲಸಿಕೆಯ ಅಭಿವೃದ್ಧಿ ಅಗತ್ಯ ಎಂದು ಗುಲೇರಿಯಾ ಹೇಳಿದ್ದಾರೆ.

ಬೂಸ್ಟರ್ ಡೋಸ್ ಎರಡನೇ ತಲೆಮಾರಿನ ಲಸಿಕೆ. ಈ ಲಸಿಕೆ ಉತ್ತಮ ರೋಗನಿರೋಧಕ ಶಕ್ತಿ ಹೊಂದಿದ್ದು, ವಿವಿಧ ರೀತಿಯ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಎಂದು ಹೇಳಿದರು. ಬೂಸ್ಟರ್ ಶಾಟ್ಸ್​​ಗಳ( ಹೆಚ್ಚುವರಿ ಬಲ ವರ್ಧಕ ಲಸಿಕೆ) ಪ್ರಯೋಗ ನಡೆಯುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಡೀ ಜನಸಂಖ್ಯೆಯ ಲಸಿಕೆ ಪೂರ್ಣಗೊಂಡ ನಂತರವೇ ಬೂಸ್ಟರ್​​ ಡೋಸ್​​ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಡಾ ಗುಲೇರಿಯಾ ಹೇಳಿದರು.

ಮಕ್ಕಳಿಗಾಗಿ ಲಸಿಕೆ:

ಲಸಿಕೆ ತಯಾರಿಕ ಸಂಸ್ಥೆಯಾದ ಭಾರತ್ ಬಯೋಟೆಕ್ ಮಕ್ಕಳಿಗಾಗಿ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಪ್ರಯೋಗದ ಫಲಿತಾಂಶಗಳು ಸೆಪ್ಟೆಂಬರ್ ವೇಳೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ಪ್ರಯೋಗವನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತಿದೆ. ಇದರಲ್ಲಿ ವಿವಿಧ ವಯಸ್ಸಿನ ಮಕ್ಕಳನ್ನು ವರ್ಗೀಕರಿಸಲಾಗಿದೆ. ಮೊದಲ ಪ್ರಯೋಗ 12-18 ವರ್ಷ ವಯಸ್ಸಿನವರಿಗೆ ಮಾಡಲಾಯಿತು.

ನಂತರ 6-12 ವರ್ಷದೊಳಗಿನವರಲ್ಲಿ ಮತ್ತು ಈಗ 2-6 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದೆ. 12-18 ವರ್ಷದೊಳಗಿನವರಿಗೆ ಲಸಿಕೆ ಸಂಬಂಧ ಪ್ರಯೋಗಗಳನ್ನು ಪೂರ್ಣಗೊಳಿಸಿದ್ದು, ತುರ್ತು ಬಳಕೆಗಾಗಿ ಅನುಮೋದನೆ ಕೋರಿದ್ದಾರೆ.

ಇನ್ನೂ ಅಹಮದಾಬಾದ್ ಮೂಲದ ಕಂಪನಿಯು ಮೂರು - ಡೋಸ್ ಲಸಿಕೆ ಸಿದ್ಧಪಡಿಸಿದೆ. ಇದು ವಿಶ್ವದ ಮೊದಲ ಪ್ಲಾಸ್ಮೋಯಿಡ್ ಲಸಿಕೆಯಾಗಿದ್ದು ಶೀಘ್ರದಲ್ಲೇ ಡಿಸಿಜಿಐನಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.

Last Updated : Jul 24, 2021, 6:44 PM IST

ABOUT THE AUTHOR

...view details