ಕರ್ನಾಟಕ

karnataka

ETV Bharat / bharat

ಮೂಗಿನ ಮೂಲಕ ಹಾಕುವ ಲಸಿಕೆ ಪ್ರಯೋಗ: Phase 2/3ಗೆ ಅನುಮೋದನೆ ಪಡೆದ ಭಾರತ್ ಬಯೋಟೆಕ್ - Bharat Biotech has received phase 2/3 human clinical trial

ಪೂರ್ವ-ಕ್ಲಿನಿಕಲ್ ಅಧ್ಯಯನಗಳಲ್ಲಿ ಒಳ್ಳೆಯ ಫಲಿತಾಂಶ ಕಂಡು ಬಂದಿದೆ. ಈ ಲಸಿಕೆ ಪ್ರಾಣಿಗಳ ಅಧ್ಯಯನದಲ್ಲಿ ಹೆಚ್ಚಿನ ಮಟ್ಟದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೊರಹಾಕಲು ಸಾಧ್ಯವಾಗಿದೆ ಎಂದು ಪ್ರಯೋಗದ ಮೂಲಕ ತಿಳಿದುಬಂದಿದೆ.

Bharat Biotech has received phase 2/3 human clinical trial nod for its nasal Covid vaccine
ಭಾರತ್ ಬಯೋಟೆಕ್

By

Published : Aug 13, 2021, 9:53 PM IST

ಹೈದರಾಬಾದ್​: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಬಿಬಿವಿ 154 ಗಾಗಿ ಭಾರತ್ ಬಯೋಟೆಕ್ ಹಂತ ಎರಡು ಹಾಗೂ ಮೂರಕ್ಕೆ ಅನುಮೋದನೆ ಪಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಂತ 1 ರಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಯಾವುದೇ ಗಂಭೀರ ಪ್ರತಿಕೂಲ ಘಟನೆ ವರದಿಯಾಗಿಲ್ಲ ಎಂದು ಹೇಳಿದೆ.

ಈ ಇಂಟ್ರಾನಾಸಲ್ ಲಸಿಕೆ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್‌ನ (ಬಿಐಆರ್‌ಎಸಿ) ಕೊನೆ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ಪಡೆದ ಮೊದಲನೆಯ ಲಸಿಕೆ ಇದು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಪ್ರಕಟಣೆಯಲ್ಲಿ ತಿಳಿಸಿದೆ.

ಪೂರ್ವ-ಕ್ಲಿನಿಕಲ್ ಅಧ್ಯಯನಗಳಲ್ಲಿ ಒಳ್ಳೆಯ ಫಲಿತಾಂಶ ಕಂಡುಬಂದಿದೆ. ಈ ಲಸಿಕೆ ಪ್ರಾಣಿಗಳ ಅಧ್ಯಯನದಲ್ಲಿ ಹೆಚ್ಚಿನ ಮಟ್ಟದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೊರಹಾಕುವುದಕ್ಕೆ ಸಂಬಂಧಪಟ್ಟಂತ ಮಾಹಿತಿ ಹೊರ ಬಿದ್ದಿದೆ.

BIRAC ಅಧ್ಯಕ್ಷೆ ಡಾ.ರೇಣು ಸ್ವರೂಪ್ ಈ ಬಗ್ಗೆ ಮಾತನಾಡಿ, ಇಲಾಖೆಯು ಮಿಷನ್ ಕೋವಿಡ್ ಸುರಕ್ಷಾ ಮೂಲಕ ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್​ ಲಸಿಕೆಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಇದುವರೆಗೆ ವಿಶ್ವದಾದ್ಯಂತ ನಾಲ್ಕು ಶತಕೋಟಿ ಡೋಸ್ ಲಸಿಕೆಗಳನ್ನು ವಿತರಿಸಿದೆ ಎಂಬುದು ಗಮನಾರ್ಹ

ABOUT THE AUTHOR

...view details