ಕರ್ನಾಟಕ

karnataka

ETV Bharat / bharat

ಈ ಆ್ಯಪ್‌ಗಳು ನಿಮ್ಮ ಫೋನಲ್ಲಿದ್ರೆ ಅಪಾಯ ಗ್ಯಾರಂಟಿ! ಚೆಕ್ ಮಾಡಿ..

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆ್ಯಂಡ್ರಾಯ್ಡ್​ ಮಾಲ್​ವೇರ್ ನಿಮ್ಮ ಫೋನಿಗೆ ಬೇಡವಾದ ಜಾಹೀರಾತುಗಳನ್ನು ಕಳುಹಿಸಲಾರಂಭಿಸಬಹುದು. ಇದರಿಂದ ಬ್ಯಾಟರಿ ಬೇಗನೇ ಮುಗಿದು ಹೋಗಬಹುದು, ಫೋನ್ ಸಿಕ್ಕಾಪಟ್ಟೆ ಬಿಸಿಯಾಗಬಹುದು, ಬಳಕೆದಾರರು ಬಯಸಿದಂತೆ ಪೋನ್ ಕೆಲಸ ಮಾಡದಿರಬಹುದು ಹಾಗೂ ನಿಮಗೆ ಗೊತ್ತಾಗದೆ ಹಣಕಾಸು ವ್ಯವಹಾರಗಳೂ ನಡೆಯಬಹುದು.

beware of these malware apps on google play store delete from your phone now
beware of these malware apps on google play store delete from your phone now

By

Published : Jun 23, 2022, 4:37 PM IST

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೆಲವೊಂದು ಡೇಂಜರಸ್ ಆಡ್​ವೇರ್​ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್​ವೇರ್​ ಆ್ಯಪ್​ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆ್ಯಪ್​ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್ ಆಗಿದೆ. ಈ ಡೇಂಜರಸ್ ಆ್ಯಪ್​ಗಳು ಎರಡೂ ಮಿಲಿಯನ್​ಗೂ ಹೆಚ್ಚು ಬಾರಿ ಡೌನ್ಲೋಡ್ ಬೇರೆ ಆಗಿರುವುದು ಕಳವಳ ಮೂಡಿಸಿದೆ.

ಸ್ಪೈವೇರ್ ಆ್ಯಪ್​ಗಳು ಇತರ ಆ್ಯಪ್​ಗಳ ಡೇಟಾವನ್ನು ಸಹ ಕಳವು ಮಾಡುತ್ತವೆ ಎಂಬುದು ಗೊತ್ತಿರಲಿ. ಆ್ಯಂಡ್ರಾಯ್ಡ್​ ಫೋನುಗಳಿಗೆ ಈಗ ಆ್ಯಡ್​ವೇರ್ ಆ್ಯಪ್​ಗಳ ಮತ್ತು ಡೇಟಾ ಕಳವು ಮಾಡುವ ಟ್ರೋಜನ್​ಗಳ ದಾಳಿಯ ಭೀತಿ ಬಹಳ ಹೆಚ್ಚಾಗಿದೆ. ಇವುಗಳಿಂದ ಹೇಗೆ ಬಚಾವಾಗಬಹುದು ಎಂಬುದನ್ನು ಪ್ರತಿಯೊಬ್ಬ ಆ್ಯಂಡ್ರಾಯ್ಡ್​ ಬಳಕೆದಾರರು ತಿಳಿದುಕೊಳ್ಳುವುದು ಅಗತ್ಯ.

ಆ್ಯಂಡ್ರಾಯ್ಡ್​ ಮಾಲ್​ವೇರ್ ಹೇಗೆ ಕೆಲಸ ಮಾಡುತ್ತದೆ?

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆ್ಯಂಡ್ರಾಯ್ಡ್​ ಮಾಲ್​ವೇರ್ ನಿಮ್ಮ ಫೋನಿಗೆ ಬೇಡವಾದ ಜಾಹೀರಾತುಗಳನ್ನು ಕಳುಹಿಸಲಾರಂಭಿಸಬಹುದು. ಇದರಿಂದ ಬ್ಯಾಟರಿ ಬೇಗನೇ ಮುಗಿದು ಹೋಗಬಹುದು, ಫೋನ್ ಸಿಕ್ಕಾಪಟ್ಟೆ ಬಿಸಿಯಾಗಬಹುದು, ಬಳಕೆದಾರರು ಬಯಸಿದಂತೆ ಪೋನ್ ಕೆಲಸ ಮಾಡದಿರಬಹುದು ಹಾಗೂ ನಿಮಗೆ ಗೊತ್ತಾಗದೆ ಹಣಕಾಸು ವ್ಯವಹಾರಗಳು ನಡೆಯಬಹುದು. ಇನ್ನು ಈ ಆ್ಯಂಡ್ರಾಯ್ಡ್​ ಮಾಲ್​ವೇರ್ ಫೋನಿಗೆ ಅಗತ್ಯವಾದ ಆ್ಯಪ್​ ಒಂದರ ರೀತಿಯಲ್ಲಿ ತನ್ನನ್ನು ಬಚ್ಚಿಟ್ಟುಕೊಳ್ಳಬಹುದು. ಯಾವ್ಯಾವುದೋ ಜಾಹೀರಾತುಗಳನ್ನು ನೀವು ನೋಡುವಂತೆ ಮಾಡಿ ಈ ಆ್ಯಪ್​ಗಳು ಹಣ ಮಾಡಬಹುದು.

ಡೇಟಾ ಕಳವು ಮಾಡುವ ಮಾಲ್​ವೇರ್​ಗಳು ಸಹ ಬಹಳವೇ ಅಪಾಯಕಾರಿ. ಇವು ನಿಮ್ಮ ಸೋಷಿಯಲ್ ಮೀಡಿಯಾ, ಬ್ಯಾಂಕ್ ಖಾತೆಗಳ ಪಾಸ್​ವರ್ಡ್​ ಹಾಗೂ ಲಾಗಿನ್ ಮಾಹಿತಿಗಳನ್ನು ಕಳವು ಮಾಡಬಲ್ಲವು.

ನಿಮ್ಮ ಫೋನಿನಲ್ಲಿ ಈ ಮಾಲ್​ವೇರ್​ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ:

  1. ಪಿಪ್ ಪಿಕ್ ಕ್ಯಾಮೆರಾ ಫೋಟೊ ಎಡಿಟರ್ (PIP Pic Camera Photo Editor): ಈ ಆ್ಯಪ್ ಈಗಾಗಲೇ 1 ಮಿಲಿಯನ್​ಗೂ ಹೆಚ್ಚು ಬಾರಿ ​ಡೌನ್ಲೋಡ್ ಆಗಿದೆ. ಇಮೇಜ್ ಎಡಿಟಿಂಗ್ ಸಾಫ್ಟ್‌ವೇರ್​ನಲ್ಲಿ ಅಡಗಿರುವ ಮಾಲ್​ವೇರ್​ ನಿಮ್ಮ ಫೇಸ್​ಬುಕ್ ಲಾಗಿನ್ ಹಾಗೂ ಪಾಸ್​ವರ್ಡ್​ ಕಳವು ಮಾಡುತ್ತದೆ.
  2. ವೈಲ್ಡ್​ ಆ್ಯಂಡ್ ಎಕ್ಸೋಟಿಕ್ ಎನಿಮಲ್ ವಾಲ್ ಪೇಪರ್ (Wild and Exotic Animal Wallpaper): ಇದೊಂದು ರೂಪ ಬದಲಾಯಿಸುವ ಮಾಲ್​ವೇರ್ ಆಗಿದೆ. ಸಿಮ್ ಟೂಲ್ ಕಿಟ್ ಎಂದು ತನ್ನ ಹೆಸರು ಬದಲಾಯಿಸಿಕೊಂಡು ಬ್ಯಾಟರಿ ಸೇವಿಂಗ್ ಆಪ್ಷನ್​ನಿಂದ ಹೊರತಾಗಿಸಿಕೊಳ್ಳುತ್ತದೆ. ಇದು 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
  3. ಝೋಡಿ ಹೋರೊಸ್ಕೋಪ್ - ಫಾರ್ಚ್ಯೂನ್ ಫೈಂಡರ್ (Zodi Horoscope - Fortune Finder): ಫೇಸ್​ಬುಕ್ ಐಡಿ ಪಾಸ್​ವರ್ಡ್​ ಕದಿಯುವ ಮತ್ತೊಂದು ಮಾಲ್​ವೇರ್ ಇದಾಗಿದೆ. 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ.
  4. ಪಿಪ್ ಕ್ಯಾಮೆರಾ 2022 (PIP Camera 2022): ಕ್ಯಾಮೆರಾ ಎಫೆಕ್ಟ್​ ರೂಪದಲ್ಲಿರುವ ಇದು ಫೇಸ್​ ಬುಕ್ ಐಡಿ ಪಾಸ್​ ವರ್ಡ್ ಕದಿಯುತ್ತದೆ. 50 ಸಾವಿರ ಡೌನ್ಲೋಡ್ ಆಗಿದೆ.
  5. ಮ್ಯಾಗ್ನಿಫೈಯರ್ ಫ್ಲ್ಯಾಶ್ ಲೈಟ್ (Magnifier Flashlight): ವಿಡಿಯೋ ಹಾಗೂ ಸ್ಟ್ಯಾಟಿಕ್ ಬ್ಯಾನರ್ ಆ್ಯಪ್ ಆಗಿರುವ ಇದೊಂದು ಮಾಲ್​ವೇರ್ ಆಗಿದೆ.

ABOUT THE AUTHOR

...view details