ನವದೆಹಲಿ: ಒಂದು ದೇಶದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಸತ್ಯವನ್ನು ಕಂಡುಹಿಡಿಯಬೇಕು ಹಾಗೂ ಸಮಸ್ಯೆಗಳ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಇಟ್ಟುಕೊಂಡು ಪ್ರತಿಕ್ರಿಯಿಸಬೇಕು ಎಂದು ವಿದೇಶಾಂಗ ಸಚಿವಾಲಯವು ಒತ್ತಾಯಿಸಿದೆ.
ಸಂವೇದನಾಶೀಲ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಹ್ಯಾಶ್‌ಟ್ಯಾಗ್‌ಗಳು ಮತ್ತು ಕಾಮೆಂಟ್‌ಗಳು ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಇಂತಹ ವಿಷಯಗಳನ್ನು ಪ್ರಕಟಿಸುವುದು ಸಮಂಜಸವಲ್ಲ ಎಂದು ಇತ್ತೀಚಿನ ಪಾಪ್ ಗಾಯಕಿಯು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಚಾರವಾಗಿ ತಿಳಿಸಿದೆ.
ಭಾರತದ ಸಂಸತ್ತು, ಸಂಪೂರ್ಣ ಚರ್ಚೆ ನಂತರವೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಧಾರಣಾವಾದಿ ಶಾಸನವನ್ನು ಜಾರಿಗೆ ತಂದಿತು. ಈ ಸುಧಾರಣೆಗಳು ವಿಸ್ತೃತ ಮಾರುಕಟ್ಟೆ ಪ್ರವೇಶವನ್ನು ನೀಡುತ್ತದೆ ಹಾಗೂ ರೈತರಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನೂ ಒದಗಿಸುತ್ತವೆ. ಆದರೆ, ವಿದೇಶಿ ವ್ಯಕ್ತಿಗಳು ರೈತರ ಪ್ರತಿಭಟನೆಗಳಲ್ಲಿ ಮೂಗು ತೂರಿಸಬಾರದು ಎಂದು ಎಂಇಎ ಎಚ್ಚರಿಸಿದೆ.