ಕರ್ನಾಟಕ

karnataka

'ನಾನು ಆತನ ಗರ್ಲ್‌ಫ್ರೆಂಡ್​ ಅಲ್ಲ': ಚೋಕ್ಸಿ ಕ್ಯೂಬಾ ಯೋಜನೆ ಬಹಿರಂಗಪಡಿಸಿದ ಬಾರ್ಬರಾ

By

Published : Jun 9, 2021, 11:05 AM IST

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(PNB) ಸಾವಿರಾರು ಕೋಟಿ ರೂ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರೋ​ದ್ಯಮಿ ಮೆಹುಲ್‌ ಚೋಕ್ಸಿ ಕ್ಯೂಬಾಗೆ ಪರಾರಿಯಾಗುವ ಯೋಜನೆಯನ್ನು ಆತನ ಗೆಳತಿ ಬಾರ್ಬರಾ ಜಬರಿಕಾ ಬುಧವಾರ ಬಹಿರಂಗಪಡಿಸಿದ್ದಾರೆ. ಅವರು ಎಂದಿಗೂ ತಪ್ಪಿಸಿಕೊಳ್ಳುವ ಯೋಜನೆ ಕುರಿತು ವಿವರಿಸಲಿಲ್ಲ. ಆದರೆ ನೀವು ನನ್ನ ಅಭಿಪ್ರಾಯವನ್ನು ಕೇಳಿದರೆ, ಕ್ಯೂಬಾ ಅವರ ಅಂತಿಮ ತಾಣವಾಗಬಹುದೆಂದು ನಾನು ಹೆಚ್ಚು ಹೆಚ್ಚು ಖಚಿತವಾಗಿ ಹೇಳಬಲ್ಲೆ ಎಂದಿದ್ದಾರೆ.

Barbara Jabarica to ANI
ಚೋಕ್ಸಿ ಕ್ಯೂಬಾ ಯೋಜನೆ ಬಹಿರಂಗ ಪಡಿಸಿದ ಬಾರ್ಬರಾ

ನವದೆಹಲಿ:ಪಿಎ​ನ್‌ಬಿ ಬಹು​ಕೋಟಿ ವಂಚನೆ ಪ್ರಕ​ರ​ಣದ ಆರೋಪಿ ವಜ್ರೋ​ದ್ಯಮಿ ಮೆಹುಲ್‌ ಚೋಕ್ಸಿ ಕ್ಯೂಬಾಗೆ ಪರಾರಿಯಾಗುವ ಯೋಜನೆಯನ್ನು ಆತನ ಗೆಳತಿ ಬಾರ್ಬರಾ ಜಬರಿಕಾ ಬಹಿರಂಗಪಡಿಸಿದ್ದಾರೆ. ಅಲ್ಲದೇ ಇದೇ ವೇಳೆ ತಾನು ಆತನ ಗರ್ಲ್​ ಫ್ರೆಂಡ್​ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ANI ಸುದ್ದಿಸಂಸ್ಥೆಯ ಪ್ರತಿನಿಧಿ ಜೊತೆ ಬಾರ್ಬರಾ ಮಾತನಾಡಿರುವ ಆಡಿಯೋ ಸಂಭಾಷಣೆ

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಾರ್ಬರಾ ಅವರು ಮುಂದಿನ ಬಾರಿ ಕ್ಯೂಬಾದಲ್ಲಿ ಭೇಟಿಯಾಗಲು ಚೋಕ್ಸಿ ಹೇಳಿದ್ದನ್ನು ತಿಳಿಸಿದರು. ಅವರು ಎಂದಿಗೂ ತಪ್ಪಿಸಿಕೊಳ್ಳುವಂತಹ (words like escape) ಪದಗಳನ್ನು ಬಳಸಲಿಲ್ಲ ಅಥವಾ ಈ ರೀತಿಯ ಯೋಜನೆಯನ್ನು ನನ್ನೊಂದಿಗೆ ಹಂಚಿಕೊಂಡಿಲ್ಲ. ಆದಾಗ್ಯೂ, ಎಂದಾದರೂ ಕ್ಯೂಬಾಗೆ ಹೋಗಿದ್ದೀರಾ ಎಂದು ಅವರು ನನ್ನನ್ನು ಎರಡು ಬಾರಿ ಕೇಳಿದರು. ಮುಂದಿನ ಬಾರಿ ನಾವು ಕ್ಯೂಬಾದಲ್ಲಿ ಭೇಟಿಯಾಗಬಹುದು ಎಂದು ಅವರು ಹೇಳಿದ್ದರು ಎಂದು ಬಾರ್ಬರಾ ತಿಳಿಸಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಮೆಹುಲ್ ಚೋಕ್ಸಿ ಇದೀಗ, ಡೊಮಿನಿಕಾ ದ್ವೀಪಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಎದುರಿಸಿದ್ದಾರೆ. ಈ ಮಧ್ಯೆ, ಆಂಟಿಗುವಾದಿಂದ ಡೊಮಿನಿಕಾಗೆ ತನ್ನನ್ನು ಅಪಹರಣ ಮಾಡಿ ಕರೆದೊಯ್ದಿದ್ದರ ಹಿಂದೆ ಅವರ ಗರ್ಲ್ ಫ್ರೆಂಡ್ ಬಾರ್ಬರಾ ಜಬರಿಕಾ ಕೈವಾಡವಿದೆ ಎಂದು ಆಂಟಿಗುವಾ ಪೊಲೀಸ್ ಕಮೀಷನರ್‌ಗೆ ನೀಡಿರುವ ದೂರಿನಲ್ಲಿ ಅವರು ಆರೋಪಿಸಿದ್ದರು.

ಆಂಟಿಗುವಾ ಮತ್ತು ಬಾರ್ಬುಡಾದ ಜಾಲಿ ಹಾರ್ಬರ್ ಪ್ರದೇಶದಲ್ಲಿ ಯಾರನ್ನಾದರೂ ಅಪಹರಿಸುವುದು "ಅಸಾಧ್ಯ" ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಬಾರ್ಬರಾ ಜಬರಿಕಾ ಹೇಳಿದ್ದಾರೆ. ತನ್ನ ನಿವಾಸದ ಸಮೀಪ ಬಾಡಿಗೆ ವಸತಿ ಸೌಕರ್ಯದಲ್ಲಿ ತಂಗಿದ್ದಾಗ ಚೋಕ್ಸಿ ತನ್ನನ್ನು ಭೇಟಿಯಾಗಿದ್ದು, ನಕಲಿ ಹೆಸರಿನೊಂದಿಗೆ ಪರಿಚಯಿಸಿಕೊಂಡಿದ್ದರು ತಿಳಿಸಿದ್ದಾರೆ.

ನನಗೂ ಈ ಅಪಹರಣಕ್ಕೂ ಯಾವುದೇ ಸಂಬಂಧ ಇಲ್ಲ. ಚೋಕ್ಸಿ ವಕೀಲರು ಮತ್ತು ಅವರ ಕುಟುಂಬದವರು ಈ ಪ್ರಕರಣದಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಇದರಿಂದ ನನ್ನ ಕುಟುಂಬ ಒತ್ತಡಕ್ಕೆ ಸಿಲುಕಿದೆ ಎಂದು ಆಕೆ ಹೇಳಿದ್ದಾರೆ.

ಇದೇ ವೇಳೆ, ನಾನು ಹಲವು ಸಂದರ್ಶನಗಳಲ್ಲಿ ಹೇಳಿದ್ದೇನೆ. ಈ ಬಗ್ಗೆ ಹಲವಾರು ಬಾರಿ ಸ್ಪಷ್ಟನೆ ನೀಡಿರುವೆ. ನಾನು ಚೋಕ್ಸಿ ಗರ್ಲ್​ ಫ್ರೆಂಡ್​ ಅಲ್ಲ. ನಾನು ನನ್ನ ಸ್ವಂತ ಆದಾಯ ಮತ್ತು ವ್ಯವಹಾರವನ್ನು ಹೊಂದಿದ್ದೇನೆ. ನನಗೆ ಅವನ ಹಣ, ಬೆಂಬಲ, ಹೋಟೆಲ್ ಬುಕಿಂಗ್ ಅಗತ್ಯವಿಲ್ಲ. ನಕಲಿ ಆಭರಣಗಳು ಅಥವಾ ಅಂತಹ ಯಾವುದೂ ನನಗೆ ಬೇಕಿಲ್ಲ.

ಕಳೆದ ವರ್ಷ ಆ್ಯಂಟಿ​ಗು​ವಾಗೆ ತೆರ​ಳಿ​ದ್ದಾಗ ನನ್ನನ್ನು ಭೇಟಿ ಮಾಡಿದ್ದ ಚೋಕ್ಸಿ ತನ್ನನ್ನು ಬೇರೆ ಹೆಸರಿನಿಂದ ಪರ​ಚ​ಯಿ​ಸಿ​ಕೊಂಡಿದ್ದ. ಆ ಬಳಿಕ ನಾವು ಆತ್ಮೀಯ ಸ್ನೇಹಿ​ತ​ರಾ​ಗಿದ್ದು, ನನಗೆ ಆತ ಹಲವು ವಜ್ರದ ಉಂಗು​ರ​ಗಳು ಮತ್ತು ಬ್ರೇಸ್‌​ಲೆ​ಟ್‌​ಗ​ಳನ್ನು ಉ​ಡು​ಗೊ​ರೆ​ಯಾಗಿ ನೀಡಿದ್ದ ಎಂದು ಬಾರ್ಬರಾ ಹೇಳಿದ್ದಾರೆ.

ಆದರೆ ಅವೆ​ಲ್ಲವೂ ನಕಲಿ ಎಂದು ತಡ​ವಾಗಿ ತಿಳಿ​ಯಿತು. ಜೊತೆಗೆ ಆ್ಯಂಟಿ​ಗು​ವಾ​ದಿಂದ ಡೊಮಿ​ನಿ​ಕಾಗೆ ತನ್ನ ಅಪ​ಹ​ರಣ ಕೃತ್ಯ​ದಲ್ಲಿ ತನ್ನ ಪ್ರೇಯ​ಸಿಯೂ ಭಾಗಿ​ಯಾ​ಗಿ​ದ್ದಳು ಎಂಬ ಚೋಕ್ಸಿ ಆರೋ​ಪ​ವನ್ನು ಜರಾ​ಬಿಕಾ ನಿರಾ​ಕ​ರಿ​ಸಿ​ದರು.

ABOUT THE AUTHOR

...view details