ಕರ್ನಾಟಕ

karnataka

ETV Bharat / bharat

ಜೂನ್​ನಲ್ಲಿ ದೇಶದ ಕೆಲವೆಡೆ ಬ್ಯಾಂಕ್​ಗಳಿಗೆ 14 ದಿನ ರಜೆ!

ಜೂನ್ ತಿಂಗಳಲ್ಲಿ ದೇಶದ ಹಲವೆಡೆ 14 ದಿನ ಬ್ಯಾಂಕ್ ರಜೆ ಇರಲಿವೆ.

Bank Holiday in June
ಜೂನ್​ನಲ್ಲಿ ದೇಶದ ಕೆಲವೆಡೆ ಬ್ಯಾಂಕ್​ಗಳಿಗೆ 14 ದಿನ ರಜೆ

By

Published : May 29, 2023, 4:09 PM IST

ನವದೆಹಲಿ: ಜೂನ್ ತಿಂಗಳಲ್ಲಿ ಆದಷ್ಟು ಬ್ಯಾಂಕ್ ಕೆಲಸಗಳು ಜಾಸ್ತಿ ಇಲ್ಲದಂತೆ ನೋಡಿಕೊಳ್ಳಿ. ಏಕೆಂದರೆ ಜೂನ್ ತಿಂಗಳಲ್ಲಿ ವಿವಿಧ ಕಾರಣಗಳಿಗಾಗಿ ಬ್ಯಾಂಕ್​ಗಳು 12 ದಿನ ಬಂದ್ ಇರಲಿವೆ. ಆರ್​ಬಿಐ ಹಾಲಿಡೇ ಲಿಸ್ಟ್ ಈ ಮಾಹಿತಿ ನೀಡಿದೆ. ಬ್ಯಾಂಕ್​​ಗಳಿಗೆ ಸಂಬಂಧಿಸಿದ ಯಾವುದಾದರೂ ಮುಖ್ಯವಾದ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ. ಇನ್ನು 2000 ರೂಪಾಯಿ ಮುಖಬೆಲೆಯ ನೋಟುಗಳು ನಿಮ್ಮ ಬಳಿಯಿದ್ದರೆ ಮಾತ್ರ ಅವನ್ನು ಬದಲಿಸಿಕೊಳ್ಳಲು ಬ್ಯಾಂಕ್​ಗೆ ಹೋಗಲೇಬೇಕು.

ಆದರೆ, ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆರ್‌ಬಿಐ ನಿಯಮಗಳ ಪ್ರಕಾರ ಪ್ರತಿ ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದಲ್ಲದೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಮುಚ್ಚಿರುತ್ತವೆ. ಇವುಗಳು ಪ್ರತಿ ತಿಂಗಳು ಇರುವ ಸಾಮಾನ್ಯ ಬ್ಯಾಂಕ್ ರಜಾದಿನಗಳಾಗಿವೆ. ಇದರ ಹೊರತಾಗಿ, ಜೂನ್‌ನಲ್ಲಿ ಯಾವ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡಲಿವೆ ಎಂಬುದನ್ನು ನೋಡೋಣ ಬನ್ನಿ.

ಜೂನ್​ನಲ್ಲಿ ಬ್ಯಾಂಕ್ ಹಾಲಿಡೇ ಲಿಸ್ಟ್​ ಹೀಗಿದೆ:

ರಜಾ ದಿನಾಂಕ ರಜೆ ಸಂದರ್ಭ
4 ಜೂನ್ ಭಾನುವಾರ ವಾರದ ರಜೆ
10 ಜೂನ್ ಎರಡನೇ ಶನಿವಾರ ರಜೆ
11 ಜೂನ್ ಭಾನುವಾರ ವಾರದ ರಜೆ
15 ಜೂನ್ ವೀರವಾರ, ರಾಜಾ ಸಂಕ್ರಾಂತಿ ದಿನ (ಈ ದಿನ ಒಡಿಶಾ ಮತ್ತು ಮಿಜೋರಾಂಗಳಲ್ಲಿ ಬ್ಯಾಂಕ್ ಬಂದ್ ಇರುತ್ತವೆ)
18 ಜೂನ್ ಭಾನುವಾರ ವಾರದ ರಜೆ
20 ಜೂನ್ ಶನಿವಾರ, ರಥಯಾತ್ರೆ ದಿನ (ಈ ದಿನ ಒಡಿಶಾ ಮತ್ತು ಮಣಿಪುರಗಳಲ್ಲಿ ಬ್ಯಾಂಕ್ ಬಂದ್ ಇರುತ್ತವೆ)
24 ಜೂನ್ ತಿಂಗಳ ಎರಡನೇ ಶನಿವಾರ
25 ಜೂನ್ ಭಾನುವಾರ ವಾರದ ರಜೆ
26 ಜೂನ್ ಖರ್ಚಿ ಪೂಜಾ ರಜೆ (ಈ ದಿನ ತ್ರಿಪುರಾದಲ್ಲಿ ಬ್ಯಾಂಕ್ ರಜೆ ಇರುತ್ತದೆ)
28 ಜೂನ್ ಈದ್ ಉಲ್ ಅಜಾ ರಜೆ (ಈ ದಿನ ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಬ್ಯಾಂಕ್ ರಜೆ ಇರುತ್ತವೆ)
29 ಜೂನ್ ಈದ್ ಉಲ್ ಅಜಾ ರಜೆ (ಈ ದಿನ ದೇಶಾದ್ಯಂತ ಬ್ಯಾಂಕ್ ರಜೆ ಇರುತ್ತವೆ)
30 ಜೂನ್ ರೀಮಾ ಈದ್ ಉಲ್ ಅಜಾ (ಈ ದಿನ ಮಿಜೋರಾಂ ಮತ್ತು ಒಡಿಶಾಗಳಲ್ಲಿ ಬ್ಯಾಂಕ್ ರಜೆ ಇರುತ್ತವೆ)

ABOUT THE AUTHOR

...view details