ನವದೆಹಲಿ :ಜೂನ್ ತಿಂಗಳು ಮುಗಿಯಲು ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇವೆ. ಹೊಸ ತಿಂಗಳು ಜುಲೈ ತನ್ನೊಂದಿಗೆ ಹಲವಾರು ಬದಲಾವಣೆಗಳನ್ನು ತರಲಿದೆ. ಪ್ರತಿ ಬಾರಿಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಜುಲೈ ತಿಂಗಳಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳು ಬಾಗಿಲು ಮುಚ್ಚಿರಲಿವೆ. ಆದರೆ ಆರ್ಬಿಐ ರಾಜ್ಯವಾರು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ನೀಡುತ್ತದೆ. ಆಯಾ ರಾಜ್ಯದಲ್ಲಿ ಈ ರಜಾದಿನಗಳು ವಿಭಿನ್ನವಾಗಿರಬಹುದು. ಜುಲೈ ತಿಂಗಳಲ್ಲಿ ಯಾವೆಲ್ಲ ದಿನಗಳಂದು ಬ್ಯಾಂಕ್ ಮುಚ್ಚಿರಲಿವೆ ಎಂಬುದನ್ನು ನೋಡೋಣ.
2023ರ ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು ಹೀಗಿವೆ:
ದಿನಾಂಕ | ದಿನ | ಕಾರಣ | ರಾಜ್ಯ |
02 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
05 ಜುಲೈ | ಬುಧವಾರ | ಗುರು ಹರಗೋವಿಂದ ಸಿಂಗ್ಜಿ ಜಯಂತಿ | ಜಮ್ಮು ಮತ್ತು ಕಾಶ್ಮೀರ |
06 ಜುಲೈ | ಗುರುವಾರ | ಎಂಎಚ್ಐಪಿ ದಿನ | ಮಿಜೋರಾಂ |
08 ಜುಲೈ | ಎರಡನೇ ಶನಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
09 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
11 ಜುಲೈ | ಮಂಗಳವಾರ | ಕೇರ ಪೂಜೆ | ತ್ರಿಪುರಾ |
13 ಜುಲೈ | ಗುರುವಾರ | ಭಾನು ಜಯಂತಿ | ಸಿಕ್ಕಿಂ |
16 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
17 ಜುಲೈ | ಸೋಮವಾರ | ಯೂ ತಿರೋಟ ಸಿಂಗ್ ಡೇ | ಮೇಘಾಲಯ |
21 ಜುಲೈ | ಶುಕ್ರವಾರ | ದೃಕ್ಪ್ಯಾ ತ್ಸೇ-ಜಿ | ಸಿಕ್ಕಿಂ |
22 ಜುಲೈ | ಶನಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
23 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
28 ಜುಲೈ | ಶುಕ್ರವಾರ | ಅಶೂರಾ | ಜಮ್ಮು ಮತ್ತು ಕಾಶ್ಮೀರ |
29 ಜುಲೈ | ಶನಿವಾರ | ಮೊಹರಮ್ | ಉತ್ತರ ಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಿಜೋರಾಂ, ತ್ರಿಪುರಾ, ಮಧ್ಯ ಪ್ರದೇಶ, ತಮಿಳುನಾಡು, ರಾಜಸ್ಥಾನ, ಪಿ. ಬಂಗಾಳ, ನವದೆಹಲಿ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ |
30 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
RBI ನ ಸೈಟ್‌ನಲ್ಲಿ ಪಟ್ಟಿಯನ್ನು ಪರಿಶೀಲಿಸಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ರಜಾ ದಿನಗಳ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. https://www.rbi.org.in/Scripts/HolidayMatrixDisplay.aspx ಕ್ಲಿಕ್ ಮಾಡುವ ಮೂಲಕ ಬ್ಯಾಂಕ್ ರಜಾದಿನಗಳ ಬಗ್ಗೆ ತಿಳಿದುಕೊಳ್ಳಬಹುದು.