ಕರ್ನಾಟಕ

karnataka

ETV Bharat / bharat

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ರೈಲಿನಲ್ಲಿ ಪ್ರಯಾಣ ನಿಷೇಧ.. ಕಾರಣ ಇಷ್ಟೇ! - 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ರೈಲಿನಲ್ಲಿ ಪ್ರಯಾಣ ನಿಷೇಧ

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಆಮ್ಲಾದಿಂದ ನಾಗ್ಪುರಕ್ಕೆ ಸಂಚರಿಸುವ 'ಮೇಮು' ರೈಲಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರಯಾಣ ನಿಷೇಧಿಸಲಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ರೈಲಿನಲ್ಲಿ ಪ್ರಯಾಣ ನಿಷೇಧ
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ರೈಲಿನಲ್ಲಿ ಪ್ರಯಾಣ ನಿಷೇಧ

By

Published : Nov 18, 2021, 2:19 PM IST

ಛಿಂದ್ವಾರಾ (ಮಧ್ಯಪ್ರದೇಶ): ಇಂದಿನಿಂದ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಆಮ್ಲಾದಿಂದ ನಾಗ್ಪುರಕ್ಕೆ 'ಮೇಮು' ( Amla to Nagpur MEMU train) ರೈಲು ತನ್ನ ಕಾರ್ಯಾಚರಣೆ ಪುನಾರಂಭಿಸಿದ್ದು, ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಒಂದು ಸೂಚನೆ ಮಾತ್ರ ಇವರ ಸಂತೋಷವನ್ನು ಹಾಳುಮಾಡಿದೆ.

ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದವರು ಮಾತ್ರ 'ಮೇಮು' ರೈಲಿನಲ್ಲಿ ಪ್ರಯಾಣಿಸಬಹುದು. ಅಷ್ಟೇ ಅಲ್ಲ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ರೈಲಿನಲ್ಲಿ ಪ್ರಯಾಣ ನಿಷೇಧಿಸಲಾಗಿದೆ (Ban on train travel for those below 18 years) ಎಂದು ಬರೆದು ಕೇಂದ್ರ ರೈಲ್ವೆ ಇಲಾಖೆಯು ಛಿಂದ್ವಾರಾ, ಪಾಂಡುರ್ಣ ಸೇರಿದಂತೆ ಕೆಲ ನಿಲ್ದಾಣಗಳಲ್ಲಿ ನೋಟಿಸ್ ಅಂಟಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ರೈಲ್ವೆ ಇಲಾಖೆಯ ನೋಟಿಸ್​

ಇದನ್ನೂ ಓದಿ: Skin To Skin Contact: 'ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ರೆ ಲೈಂಗಿಕ ದೌರ್ಜನ್ಯವಲ್ಲ' ಎಂಬ ಬಾಂಬೆ ಹೈಕೋರ್ಟ್​ ತೀರ್ಪು ರದ್ದುಗೊಳಿಸಿದ ಸುಪ್ರೀಂ

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೋವಿಡ್​ ಲಸಿಕೆ ಲಭ್ಯವಿಲ್ಲದ ಕಾರಣ ಕೇಂದ್ರ ರೈಲ್ವೆ ಇಲಾಖೆ (Central Railway Department) ಈ ಕ್ರಮ ಕೈಗೊಂಡಿದೆ ಎಂದು ಪಾಂಡುರ್ಣ ರೈಲ್ವೆ ನಿಲ್ದಾಣದ ಅಧಿಕಾರಿ ಎಸ್ ಕೆ ಮಿಶ್ರಾ ತಿಳಿಸಿದ್ದಾರೆ.

ABOUT THE AUTHOR

...view details