ನವದೆಹಲಿ:ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಜ್ವರ ಮತ್ತು ವೈರಲ್ ಬ್ರಾಂಕೈಟಿಸ್ ರೋಗಿಗಳ ಪ್ರಕರಣಗಳಲ್ಲಿ ಪ್ರತಿಜೀವಕಗಳನ್ನು ಬಳಸದಂತೆ ವೈದ್ಯರಿಗೆ ಸಲಹೆ ನೀಡಿದೆ. ಶನಿವಾರ ಬಿಡುಗಡೆ ಮಾಡಿದ ತನ್ನ ಮಾರ್ಗಸೂಚಿಗಳಲ್ಲಿ, ಪ್ರತಿಜೀವಕ ಮಾತ್ರೆಗಳನ್ನು ಶಿಫಾರಸು ಮಾಡುವಾಗ ಸಮಯವನ್ನು ಅನುಸರಿಸಲು ವೈದ್ಯರಿಗೆ ಸೂಚನೆ ನೀಡಿದೆ.
ನ್ಯುಮೋನಿಯಾಕ್ಕೆ ಎಂಟು ದಿನಗಳವರೆಗೆ ಪ್ರತಿಜೀವಕಗಳನ್ನು ಶಿಫಾರಸು ಮಾಡಬೇಕೆಂದು ICMR ಮಾರ್ಗಸೂಚಿಗಳು ಸೂಚಿಸುತ್ತವೆ. ಚರ್ಮ ಮತ್ತು ಅಂಗಾಂಶಗಳ ಸೋಂಕುಗಳಿಗೆ ಐದು ದಿನಗಳ ಪ್ರತಿಜೀವಕ ಚಿಕಿತ್ಸೆಯ ಅವಧಿಯನ್ನು ಸೂಚಿಸುತ್ತದೆ. ಪ್ರತಿಜೀವಕಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಮಾರ್ಗಸೂಚಿಗಳ ಪ್ರಕಾರ, "ಶಿಫಾರಸು ಮಾಡಿದ ಅವಧಿಯನ್ನು ಮೀರಿ ಪ್ರತಿಜೀವಕಗಳನ್ನು ನೀಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಂದು ದಿನಾಂಕವನ್ನು ಮುಂಚಿತವಾಗಿ ದಾಖಲಿಸಬೇಕು ಎಂದು ಹೇಳಿದೆ.
ದೇಶಾದ್ಯಂತ ಪ್ರತಿಜೀವಕ ನಿರೋಧಕತೆಯ ಪ್ರವೃತ್ತಿಯನ್ನು ಅಳೆಯಲು ICMR ಇತ್ತೀಚೆಗೆ ನಡೆಸಿದ ಸಮೀಕ್ಷೆಯು ರಕ್ತ, ಮೂತ್ರನಾಳ ಮತ್ತು ಶ್ವಾಸಕೋಶಗಳಲ್ಲಿ ಸೋಂಕನ್ನು ಉಂಟುಮಾಡುವ ಋಣಾತ್ಮಕ ಬ್ಯಾಕ್ಟೀರಿಯಾವಾದ ಅಸಿನೆಟೊಬ್ಯಾಕ್ಟರ್ ಬೌಮನ್ನಿಯು ಉನ್ನತ ಮಟ್ಟದ ಪ್ರತಿಜೀವಕಗಳಿಗೆ ನಿರೋಧಕವಾಗಿದೆ ಎಂದು ತಿಳಿಸಿದೆ.