ಕರ್ನಾಟಕ

karnataka

ETV Bharat / bharat

101 ಕೇಸ್​ ಎದುರಿಸುತ್ತಿರುವ ಮಾಫಿಯಾ ಡಾನ್​ ಅತೀಕ್​ ಅಹ್ಮದ್​: ಕಿಡ್ನಾಪ್​ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ - ಉತ್ತರ ಪ್ರದೇಶದ ಮಾಫಿಯಾ ಡಾನ್​

ಉತ್ತರ ಪ್ರದೇಶದ ಮಾಫಿಯಾ ಡಾನ್​ ಅತೀಕ್​ ಅಹ್ಮದ್​ಗೆ ಮೊದಲ ಬಾರಿಗೆ ಪ್ರಕರಣವೊಂದಲ್ಲಿ ಶಿಕ್ಷೆಯಾಗಿದೆ. ಇದುವರೆಗೆ ಅತೀಕ್ ವಿರುದ್ಧ 101 ಪ್ರಕರಣಗಳು ದಾಖಲಾಗಿದ್ದು, ಇದೀಗ ಉಮೇಶ್​ ಪಾಲ್​ ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Atiq Ahmed gets life term in umesh-pal-kidnapping-case
101 ಕೇಸ್​ ಎದುರಿಸುತ್ತಿರುವ ಅತೀಕ್​ ಅಹ್ಮದ್​ಗೆ ಮೊದಲ ಬಾರಿಗೆ ಶಿಕ್ಷೆ ಪ್ರಕಟ: ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿ

By

Published : Mar 28, 2023, 4:03 PM IST

Updated : Mar 28, 2023, 4:27 PM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಕೀಲ ಉಮೇಶ್​ ಪಾಲ್​ ಅಪಹರಣ ಪ್ರಕರಣದಲ್ಲಿ ಗ್ಯಾಂಗ್​ಸ್ಟರ್​, ರಾಜಕಾರಣಿ ಅತೀಕ್​ ಅಹ್ಮದ್​​ ಸೇರಿ ಮೂವರಿಗೆ ಪ್ರಯಾಗರಾಜ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ವೇಳೆ ಅತೀಕ್​ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್​ ಸೇರಿದಂತೆ 7 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

2005ರ ಜನವರಿ 25ರಂದು ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ಉಮೇಶ್​ ಪಾಲ್ ಆಗಿದ್ದರು. 2023ರ ಫೆಬ್ರುವರಿ​ 24ರಂದು ಉಮೇಶ್​ ಪಾಲ್ ಅವರನ್ನೂ ಕೊಲೆ ನಡೆದಿತ್ತು. ಆದರೆ, ಇದಕ್ಕೂ ಮೊದಲು ಎಂದರೆ 2005-06 ಸಾಲಿನಲ್ಲೇ ಪ್ರಕರಣದಿಂದ ಹಿಂದೆ ಸರಿಯುವಂತೆ ಉಮೇಶ್​ ಪಾಲ್​ಗೆ ಅತೀಕ್ ಅಹ್ಮದ್​ ಬೆದರಿಕೆಯಾಗಿದ್ದ. ಈ ವೇಳೆ ಇದಕ್ಕೊಪ್ಪದ ಕಾರಣಕ್ಕೆ ಉಮೇಶ್​ ಪಾಲ್​​ರನ್ನು 2006ರ ಫೆಬ್ರವರಿ 28ರಂದು ಅಪಹರಣ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅತೀಕ್​ ಅಹ್ಮದ್​ ಸೇರಿದಂತೆ 11 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.

ಇಂದು ಪ್ರಯಾಗರಾಜ್ ಜಿಲ್ಲಾ ನ್ಯಾಯಾಲಯದ ಸಂಸದ-ಶಾಸಕ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಡಾ. ದಿನೇಶ್ ಚಂದ್ರ ಶುಕ್ಲಾ ಅವರು ಅತೀಕ್​ ಅಹ್ಮದ್​, ಆತನ ನಿಕಟವರ್ತಿಗಳಾದ ಶೌಕತ್ ಹನೀಫ್ ಮತ್ತು ದಿನೇಶ್ ಪಾಸಿ ಸೇರಿ ಮೂವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದಾರೆ. ಅಲ್ಲದೇ, ಇಂದೇ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ತಪ್ಪಿತಸ್ಥರಿಗೆ ತಲಾ 5 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಇದಲ್ಲದೇ, ಒಂದು ಲಕ್ಷ ರೂಪಾಯಿ ಪರಿಹಾರವನ್ನೂ ನೀಡಬೇಕೆಂದು ಆದೇಶಿಸಲಾಗಿದೆ.

ಚಪ್ಪಲಿ ಹಾರ ಹಾಕಲು ಯತ್ನ:ಅತೀಕ್ ಅಹ್ಮದ್​ ಕುರಿತ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಕೋರ್ಟ್​ನಲ್ಲಿ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿತ್ತು. ಮತ್ತೊಂದೆಡೆ, ಉಮೇಶ್ ಪಾಲ್ ಅಪಹರಣ ಮತ್ತು ಹತ್ಯೆಯಿಂದ ಆಕ್ರೋಶಗೊಂಡಿದ್ದ ಇತರ ವಕೀಲರು ಇಂದು ಅತೀಕ್​ಗೆ ಹಾಕಲೆಂದು ಚಪ್ಪಲಿ ಹಾರ ಹಿಡಿದು ಬಂದಿದ್ದರು. ಆದರೆ, ಪೊಲೀಸರು ನ್ಯಾಯಾಲಯದ ಗೇಟ್ ಮುಂದೆಯೇ ವಕೀಲರನ್ನು ತಡೆದು ವಾಪಸ್ ಕಳುಹಿಸಿದರು.

ಮೊದಲ ಬಾರಿಗೆ ಅತೀಕ್​ಗೆ ಶಿಕ್ಷೆ:ಅತೀಕ್​ ಅಹ್ಮದ್​ ಮೂಲತಃ ಒಬ್ಬ ಮಾಫಿಯಾ ಡಾನ್​. 33 ವರ್ಷಗಳ ಹಿಂದೆ ಅಪರಾಧ ಜಗತ್ತಿಗೆ ಅತೀಕ್ ಕಾಲಿಟ್ಟಿದ್ದ. ಇದರ ನಡುವೆ 1989ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ. ಇದೇ ವರ್ಷ ಮೊದಲ ಬಾರಿಗೆ ಈತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಐದು ಬಾರಿ ವಿಧಾನಸಭೆ ಮತ್ತು 2004ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಗೆಲುವುದು ಸಾಧಿಸಿದ್ದ. ಫೆಬ್ರವರಿ 24ರಂದು ಉಮೇಶ್ ಪಾಲ್ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ ಸಂಬಂಧ ಅತೀಕ್​ ಅಹ್ಮದ್​ ವಿರುದ್ಧ ಕೊನೆಯ ಕೇಸ್​ ದಾಖಲಾಗಿದೆ.

ಇದುವರೆಗೆ ಒಟ್ಟಾರೆ ಅತೀಕ್ ವಿರುದ್ಧ 101 ಪ್ರಕರಣಗಳು ದಾಖಲಾಗಿದ್ದು, ಆತನ ಸಹೋದರ ಅಶ್ರಫ್ ಕೂಡ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅತೀಕ್​ನ ಪತ್ನಿ ಶೈಸ್ತಾ ಪರ್ವೀನ್​ ಮತ್ತು ಮಕ್ಕಳ ಮೇಲೂ ಪೊಲೀಸ್​ ಪ್ರಕರಣಗಳು ಇವೆ. ಪತ್ನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಅತೀಕ್ ಮತ್ತು ಈತನ ಸಹೋದರರಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ. ಇದೇ ಮೊದಲ ಬಾರಿಗೆ ಅತೀಕ್​ ಅಹ್ಮದ್​ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಇನ್ನು, ಸದ್ಯ ಗುಜರಾತ್​ನ ಸಬರಮತಿ ಜೈಲಿನಲ್ಲಿ ಅತೀಕ್​ನನ್ನು ಇರಿಸಲಾಗಿತ್ತು. ಉಮೇಶ್​ ಪಾಲ್ ಅಪಹರಣ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಮಾರ್ಚ್​ 26ರಂದು ಉತ್ತರ ಪ್ರದೇಶದ 45 ಜನರ ಪೊಲೀಸರ ತಂಡವು ಬಿಗಿ ಭದ್ರತೆಯಲ್ಲಿ ಪ್ರಯಾಗರಾಜ್​ಗೆ ಸ್ಥಳಾಂತರ ಮಾಡಿ, ಕೋರ್ಟ್​ಗೆ ಹಾಜರು ಪಡಿಸಿದ್ದರು.

ಇದನ್ನೂ ಓದಿ:ಭಾರಿ ಭದ್ರತೆಯೊಂದಿಗೆ ಸಾಬರಮತಿಯಿಂದ ಯುಪಿಗೆ ಕರೆತಂದ ಪೊಲೀಸರು.. ಡಾನ್​ ಅತೀಕ್​ಗೆ ಹತ್ಯೆ ಭೀತಿ

Last Updated : Mar 28, 2023, 4:27 PM IST

ABOUT THE AUTHOR

...view details