ನವದೆಹಲಿ:ಅಸ್ಸೋಂನ ಸಿಲ್ಚಾರ್ನ ವಿಕಲಚೇತನ ಕಲಾವಿದ ಅಭಿಜೀತ್ ಗೋಟಾನಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದರು. ಈ ವೇಳೆ, ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ವಿಶೇಷ ಚೇತನ ಕಲಾವಿದನ ಕನಸು ನನಸು ಮಾಡಿರುವ ಶ್ರೇಯ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಲ್ಲುತ್ತದೆ.
ಪಿಎಂಗೆ ವಿಶೇಷ ಗಿಫ್ಟ್ ನೀಡಿದ ಅಭಿಜೀತ್ 28 ವರ್ಷದ ಅಭಿಜೀತ್ ಗೋಟಾನಿ ವಿಶೇಷಚೇತನ ಯುವಕನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಬೇಕೆಂಬ ಆಸೆ ಹೊಂದಿದ್ದರು. ಅದು ಇದೀಗ ಸಾಧ್ಯವಾಗಿದೆ. ತಮ್ಮೊಂದಿಗೆ ವಿಶೇಷ ಉಡುಗೊರೆ ತೆಗೆದುಕೊಂಡು ಬಂದಿದ್ದ ಪೇಂಟಿಂಗ್ ಅನ್ನು ಮೋದಿ ಅವರಿಗೆ ನೀಡಿದ್ದಾರೆ. ಇದರಲ್ಲಿ ನಮೋ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿರುವುದು ಸೇರಿದಂತೆ ಅನೇಕ ಚಿತ್ರಗಳ ಸಂಗ್ರಹವಿದೆ.
ಕಲಾವಿದ ಅಭಿಜೀತ್ ಗೋಟಾನಿ ಬಿಡಿಸಿದ ಚಿತ್ರ ನಿತ್ಯ ಪ್ರಧಾನಿ ಮೋದಿ ಅವರನ್ನ ಟಿವಿಗಳಲ್ಲಿ ನೋಡುತ್ತೇನೆ. ಆದರೆ, ಇದೀಗ ಖುದ್ದಾಗಿ ಭೇಟಿಯಾಗಿದ್ದೇನೆ. ಇದು ತುಂಬಾ ಸಂತೋಷ ಮೂಡಿಸಿದೆ ಎಂದು ಅವರು ತಮ್ಮ ಭಾಷೆಯಲ್ಲಿ ವರ್ಣಿಸಿದ್ದಾರೆ. ಅವರು ತುಂಬಾ ಮೃದು ಹಾಗೂ ಸರಳ ಹೃದಯ ವ್ಯಕ್ತಿಯಾಗಿದ್ದಾರೆ ಎಂದರು.
ವಿಶೇಷಚೇತನ ಕಲಾವಿದನ ಆಸೆ ಪೂರೈಸಿದ ಅಸ್ಸೋಂ ಸಿಎಂ ಇದನ್ನೂ ಓದಿರಿ:'ಹರ್ ಘರ್ ತಿರಂಗಾ' ಆಂದೋಲನ ಬೆಂಬಲಿಸಿ: ರಾಷ್ಟ್ರದ ಜನತೆಗೆ ಪ್ರಧಾನಿ ಮೋದಿ ಕರೆ
ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಅವರಿಗೆ ವರ್ಣಚಿತ್ರ ನೀಡಲು ಕುಟುಂಬವೊಂದು ಸಿಲ್ಚಾರ್ನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಗೋಟಾನಿ ತಾವು ಬಿಡಿಸಿದ್ದ ವರ್ಣಚಿತ್ರವನ್ನ ಪ್ರಧಾನಿ ಮೋದಿ ಅವರಿಗೆ ನೀಡುವ ಬಯಕೆ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪ್ರಧಾನಿ ಕಚೇರಿಗೆ ಪತ್ರ ಸಹ ಬರೆದಿದ್ದರು. ಇದೀಗ ಅದು ಸಹಕಾರಗೊಂಡಿದೆ.