ಮುಂಬೈ :ಕಳೆದ 19 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ಖಾನ್ ನಿಧಾನವಾಗಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರು.
ಆದರೆ, ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿದಾಗ ಮತ್ತೆ ನಿರಾಶೆಕೊಂಡಿದ್ದರು. ಇದೀಗ ಅವರು ಇತರೆ ಕೈದಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಜೈಲಿನ ಆವರಣದಲ್ಲಿರುವ ದೇವಸ್ಥಾನದಲ್ಲಿ ಸಂಜೆ 7 ಗಂಟೆಗೆ ಆರತಿ ನಡೆಸಲಾಗುತ್ತದೆ.
ಮೂಲಗಳ ಪ್ರಕಾರ, ಅವರು ಆರತಿ ಮುಗಿಯುವವರೆಗೆ ದೇವಸ್ಥಾನದಲ್ಲಿಯೇ ಇದ್ದು, ಜೈಲಿನ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಈ ಮಧ್ಯೆ ಅವರು ಧಾರ್ಮಿಕ ಗ್ರಂಥಗಳನ್ನು ನೀಡಬೇಕೆಂದು ಜೈಲಾಡಳಿತಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಆರ್ಯನ್ ಖಾನ್, ನಾಲ್ಕು ದಿನಗಳ ಕಾಲ ಸ್ನಾನ ಮಾಡಲಿಲ್ಲ, ಊಟವೂ ತಿಂದಿರಲಿಲ್ಲ. ಆರ್ಯನ್ ಮನೆಯಿಂದಲೇ ಎರಡು ಬೆಡ್ಶೀಟ್ ಮತ್ತು ಕೆಲ ಬಟ್ಟೆಗಳನ್ನು ಕಳುಹಿಸಲಾಗಿದೆ.
ಆದರೂ, ಅಧಿಕಾರಿಗಳು ಅವನಿಗೆ ಜೈಲಿನ ಕಂಬಳಿ ನೀಡಿದ್ದರು. ಇಂದು ಮುಂಜಾನೆ ಕಾನ್ಸ್ಟೇಬಲ್ ಆರ್ಯನ್ಗೆ ಬಿಸ್ಕೆಟ್ ನೀಡಿದ್ದರು ಎಂದು ತಿಳಿದು ಬಂದಿದೆ. ಆರ್ಯನ್, ಜೈಲು ಸೇರುವ ಮುನ್ನ ಡಜನ್‌ಗಟ್ಟಲೇ ವಾಟರ್ ಬಾಟಲ್ ಖರೀದಿಸಿದ್ದರು.
ಸದ್ಯ ಆತನ ಬಳಿ ಮೂರು ನೀರಿನ ಬಾಟಲ್ ಮಾತ್ರ ಉಳಿದಿವೆ. ಅಕ್ಟೋಬರ್ 26ರಂದು ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಧಾರ್ಮಿಕ ಪುಸ್ತಕ ನೀಡುವಂತೆ ಜೈಲಾಧಿಕಾರಿಗಳಿಗೆ ನಟ ಶಾರುಕ್ ಪುತ್ರ ಆರ್ಯನ್ ಖಾನ್ ಒತ್ತಾಯ