ಚೆನ್ನೈ:ಭಾರತದ ಮೊದಲ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದುರಂತಕ್ಕೆ ಅಮೆರಿಕ, ರಷ್ಯಾ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಸಂತಾಪ ವ್ಯಕ್ತವಾಗಿದೆ.
ಯುಎಸ್ ರಾಯಭಾರ ಕಚೇರಿಯು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ಭಾರತದ ಮೊದಲ ಸಿಡಿಎಸ್ ಆಗಿ ಜನರಲ್ ರಾವತ್ ಭಾರತೀಯ ಸೇನೆಯಲ್ಲಿ ಐತಿಹಾಸಿಕ ಪರಿವರ್ತನೆಗೆ ಕಾರಣರಾಗಿದ್ದರು. ಅಲ್ಲದೆ ಅವರು ಅಮೆರಿಕದ ಉತ್ತಮ ಸ್ನೇಹಿತ ಮತ್ತು ಪಾಲುದಾರರಾಗಿದ್ದರು. ಯುಎಸ್ ಸೇನೆಯೊಂದಿಗೆ ಭಾರತದ ರಕ್ಷಣಾ ಸಹಕಾರದ ವಿಸ್ತರಣೆಯ ಪ್ರಮುಖ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದೆ.
ರಾವತ್ ಅವರ ಕುಟುಂಬಕ್ಕೆ ಮತ್ತು ಅಪಘಾತದಲ್ಲಿ ಮೃತರಾದ ಇತರರ ಕುಟುಂಬಗಳಿಗೂ ಕೂಡ ನಮ್ಮ ಕಡೆಯಿಂದ ತೀವ್ರ ಸಂತಾಪವಿದೆ. ರಾವತ್ ಅವರು ಅಮೆರಿಕ ಹಾಗೂ ಭಾರತ ರಕ್ಷಣಾ ಪಾಲುದಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಹೇಳಿದ್ದಾರೆ. ಅಲ್ಲದೆ ಯುಎಸ್ ಚೇರ್ಮನ್ ಆಫ್ ಸ್ಟಾಫ್ ಜಂಟಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಅವರು, ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ರಾವತ್ ಭಾರತೀಯ ಸೇನೆಯೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಿದ್ದರು ಎಂದು ತಿಳಿಸಿದ್ದಾರೆ.
'ರಷ್ಯಾ ಅತ್ಯಂತ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದೆ':