ಗಡಿ ದಾಟಿ ಬಂದಿದ್ದ ಇಬ್ಬರು ಪಾಕಿಸ್ತಾನಿ ಬಾಲಕಿಯರನ್ನು ಬಂಧಿಸಿದ ಸೇನೆ - Pakistani girls in Jammu and Kashmir border
12:34 December 06
ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕಿಯರು ಇಂದು ಗಡಿ ದಾಟಿ ಭಾರತದೊಳಗೆ ಬಂದಿದ್ದರು. ಅಜಾಗರೂಕತೆಯಿಂದ ಗಡಿ ದಾಟಿದ್ದರೆನ್ನಲಾದ ಈ ಇಬ್ಬರನ್ನು ಸೇನೆ ಬಂಧಿಸಿದೆ.
ಪೂಂಚ್ (ಜಮ್ಮು-ಕಾಶ್ಮೀರ): ಪೂಂಚ್‌ನಲ್ಲಿ ಇಂದು ಬೆಳಗ್ಗೆ ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕಿಯನ್ನು ಸೇನೆ ಬಂಧಿಸಿದೆ.
ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ದಾಟಿದ್ದರೆನ್ನಲಾದ ಲೈಬಾ ಜಬೈರ್ (17), ಸನಾ ಜಬೈರ್ (13) ಎಂಬ ಇಬ್ಬರು ಹುಡುಗಿಯರನ್ನು ಸೆರೆಹಿಡಿಯಲಾಗಿದೆ.
ಬಾಲಕಿಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಅವರ ವಾಪಸಾತಿಗೆ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.