ಆಂಧ್ರಪ್ರದೇಶ:ಇಲ್ಲಿನ ವಿಶಾಖಪಟ್ಟಣಂ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆಂಧ್ರ-ಒಡಿಶಾ ಗಡಿಯಲ್ಲಿ ಆರು ಮಂದಿ ನಕ್ಸಲರನ್ನು ಬಂಧಿಸಿದ್ದಾರೆ.
ಶಾಸಕರ ಹತ್ಯೆ ಪ್ರಕರಣ ಸಂಬಂಧ 6 ನಕ್ಸಲರ ಬಂಧನ: ಆಂಧ್ರ ಪೊಲೀಸರ ವಿಶೇಷ ಕಾರ್ಯಾಚರಣೆ - Naxal arrested in Odisha Andrapradesh Border
ಮಾವೋವಾದಿ ನಾಯಕ ಆರ್.ಕೆ ಗನ್‌ಮೆನ್ ಸೇರಿದಂತೆ ಆರು ಮಂದಿ ನಕ್ಸಲರನ್ನು ಆಂಧ್ರ-ಒಡಿಶಾ ಗಡಿಯಲ್ಲಿ ವಿಶಾಖಪಟ್ಟಣ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನಕ್ಸಲರ ಬಂಧನ
ಬಂಧಿತರಲ್ಲಿ ಮಾವೋವಾದಿ ನಾಯಕ ಆರ್.ಕೆ ಗನ್‌ಮೆನ್ ಕೂಡ ಸೇರಿದ್ದಾನೆ. ಈ ನಕ್ಸಲರು ಅರಕು ವಿಧಾನಸಭೆ ಕ್ಷೇತ್ರದ ಶಾಸಕ ಕಿದರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಇಡೀ ಪ್ರಕರಣದ ಬಗ್ಗೆ ಆಂಧ್ರಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಮಾಧ್ಯಮಗೋಷ್ಟಿ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Last Updated : Aug 12, 2021, 2:21 PM IST