ಕೋರಾಪುಟ್ (ಒಡಿಶಾ):ಗಡಿ ಸಮಸ್ಯೆಯಿಂದಾಗಿ ಚುನಾವಣಾ ಆಯೋಗ ಹಾಗೂ ಒಡಿಶಾ ಸರ್ಕಾರದ ನಡುವೆ ಗೊಂದಲ ಏರ್ಪಟ್ಟಿದ್ದು, ಅಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಯಾವ ರಾಜ್ಯಗಳಿಗೆ ಈ ಹಳ್ಳಿಗಳು ಸೇರಬೇಕೆಂಬುದು ನಿರ್ಧಾರವಾಗದಿರುವ ಹಿನ್ನೆಲೆ ಈ ಗೊಂದಲ ಏರ್ಪಟ್ಟಿತ್ತು. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ನಡುವೆ ವಿವಾದವಿದ್ದು, ಈ ನಡುವೆ ಒಡಿಶಾ ಸರ್ಕಾರ ಎರಡೂ ಗ್ರಾಮಗಳನ್ನ ಕಂಟೇನ್ಮೆಂಟ್ ಝೋನ್( ನಿರ್ಬಂಧಿತ ವಲಯ) ಎಂದು ಘೋಷಣೆ ಮಾಡಿದೆ.
ಒಡಿಶಾ ಸರ್ಕಾರದ ಈ ಆದೇಶದ ನಡುವೆಯೂ ಆಂಧ್ರಪ್ರದೇಶ ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಕೊಟಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ವಿವಾದ ನಡೆದಿದ್ದು, ಫತ್ತುಸುನೇರಿ ಮತ್ತು ನೆರೆಡಿಬಾಲಸಾ ಹಳ್ಳಿಗಳನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿ ಕೊರಾಪುಟ್ ಜಿಲ್ಲಾಧಿಕಾರಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಅಧಿಕಾರಿಗಳು, ಪೊಲೀಸರ ನಡುವೆ ಮಾರಾಮಾರಿ ಆದರೆ ಆಂಧ್ರಪ್ರದೇಶ ಚುನಾವಣಾ ಆಯೋಗ ಹಾಗೂ ಅಲ್ಲಿನ ಪೊಲೀಸರು ಚುನಾವಣೆ ನಡೆಸಲು ಬೂತ್ಗಳನ್ನ ಏರ್ಪಾಡು ಮಾಡಿ ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಆರಂಭಿಸಿದ್ದರು. ಈ ಎರಡೂ ಹಳ್ಳಿಗಳು ತಮಗೆ ಸೇರಿದ್ದು ಎಂದು ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಪ್ರತಿಪಾದನೆ ಮಾಡಿದ್ದು, ಈ ವೇಳೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಹೀಗಾಗಿ ಎರಡೂ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಲ್ಲದರ ನಡುವೆ ಈ ಭಾಗದಲ್ಲಿ ಕಡಿಮೆ ಮತದಾನವೂ ನಡೆಯಿತು. ಈ ಎರಡೂ ಗ್ರಾಮಗಳಲ್ಲಿ ಸುಮಾರು 1,291 ಮತದಾರರಿದ್ದಾರೆ. ಇದರಲ್ಲಿ ಕೇವಲ 223 ಮತದಾರರು ಮತದಾನ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಸರ್ಪಂಚ್ ಚುನಾವಣೆಯಲ್ಲಿ ಇಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಈ ನಡುವೆ ಗ್ರಾಮಗಳ ಹಕ್ಕಿನ ವಿಚಾರವಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜಕೀಯ ನಾಯಕರು ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.