ಅಮರಾವತಿ:ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಆಂಧ್ರ ಹೈಕೋರ್ಟ್ ಇತಿಶ್ರೀ ಹಾಡಿದ್ದು, ಅಮರಾವತಿಯೇ ರಾಜಧಾನಿಯಾಗಿರಲಿದೆ ಎಂದು ತೀರ್ಪು ನೀಡಿದೆ. ಅಲ್ಲದೇ ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಮೂರು ರಾಜಧಾನಿ ಕಲ್ಪನೆಯನ್ನು ಕೈಬಿಟ್ಟಿರುವ ಆಂಧ್ರ ಹೈಕೋರ್ಟ್ ಅಮರಾವತಿಯನ್ನೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಿ ಎಂದು ಸೂಚಿಸಿದೆ. ಮೂರು ರಾಜಧಾನಿ ಮತ್ತು ಸಿಆರ್ಡಿಪಿ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಸಿಆರ್ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು. ಪ್ರಣಾಳಿಕೆಯಲ್ಲಿ ನೀಡಿದಂತೆ 6 ತಿಂಗಳಲ್ಲಿ ಅಮರಾವತಿ ಅಭಿವೃದ್ಧಿಗೊಳಿಸಬೇಕು. ಭೂಮಿ ನೀಡಿದ ರೈತರಿಗೆ 3 ತಿಂಗಳಲ್ಲಿ ಪರ್ಯಾಯ ಭೂಮಿ ನೀಡಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.