ನವದೆಹಲಿ: ಫಿಟ್ ಇಂಡಿಯಾ ಅಭಿಯಾನದ 2ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಇಂದು ಫಿಟ್ ಇಂಡಿಯಾ ಮೊಬೈಲ್ ಆ್ಯಪ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಚಾಲನೆ ನೀಡಿದರು.
ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಲಿಕೇಶನ್ ಬಿಡುಗಡೆಗೂ ಮುನ್ನ ಸಚಿವ ಅನುರಾಗ್ ಠಾಕೂರ್, ಸ್ಕಿಪ್ಪಿಂಗ್ ಆಡಿದರು. ವಿಡಿಯೋ ಇಲ್ಲಿದೆ ನೋಡಿ...
ಫಿಟ್ ಇಂಡಿಯಾ ಆ್ಯಪ್, ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ. ಬೇಸಿಕ್ ಸ್ಮಾರ್ಟ್ ಫೋನ್ ಗಳಲ್ಲೂ ಕಾರ್ಯನಿರ್ವಹಿಸುವಂತೆ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇಂದಿನಿಂದ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Mann Ki Baat: ದೇಶದ 'ಯುವ ಶಕ್ತಿ'ಶ್ಲಾಘಿಸಿದ ಪ್ರಧಾನಿ ಮೋದಿ; ಸಂಪ್ರದಾಯ-ಸಂಸ್ಕೃತ ಪ್ರೀತಿಸಲು ಕರೆ
ಭಾರತವನ್ನು ಸದೃಢ ಮತ್ತು ಆರೋಗ್ಯಕರ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ, 2019ರ ಆಗಸ್ಟ್ 29ರಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಕಳೆದ ಎರಡು ವರ್ಷಗಳಿಂದೀಚೆಗೆ, ಫಿಟ್ ಇಂಡಿಯಾ ಶಾಲಾ ಸಪ್ತಾಹ, ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ, ಫಿಟ್ ಇಂಡಿಯಾ ಸೈಕ್ಲಥಾನ್ ಮತ್ತಿತರ ಹಲವು ಸದೃಢ ಅಭಿಯಾನಗಳ ಮೂಲಕ ಈ ಅಭಿಯಾನ ದೇಶದ ಲಕ್ಷಾಂತರ ಜನರನ್ನು ತಲುಪಿದೆ.