ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲೂ ಆವಿನ್​ vs ಅಮುಲ್​... ತಮಿಳರಿಂದ ಭಾರಿ ವಿರೋಧ!

ಗುಜರಾತ್ ಮೂಲದ ಅಮುಲ್, ಹಿಂದುಳಿದ ಕೃಷ್ಣಗಿರಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹಾಲು ಸಂಗ್ರಹ ಆರಂಭಿಸಿದೆ. ಇದು ರಾಜಕೀಯಕ್ಕೆ ಕಾರಣವಾಗಿದೆ. ಅಮೂಲ್​ನ ಈ ಕಾರ್ಯಾಚರಣೆ ತಮಿಳು ಪರ ಕಾರ್ಯಕರ್ತರನ್ನು ಕೆರಳಿಸಿದೆ. ರಾಜ್ಯಕ್ಕೆ ಅಮುಲ್ ಪ್ರವೇಶವನ್ನು ತಡೆಯುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಬಗ್ಗೆ ಎಂ ಸಿ ರಾಜನ್ ಹೀಗೆ ಹೇಳುತ್ತಾರೆ

ತಮಿಳುನಾಡಿನಲ್ಲೂ ಆವಿನ್​ vs ಅಮುಲ್​... ತಮಿಳರಿಂದ ಭಾರಿ ವಿರೋಧ!
ತಮಿಳುನಾಡಿನಲ್ಲೂ ಆವಿನ್​ vs ಅಮುಲ್​... ತಮಿಳರಿಂದ ಭಾರಿ ವಿರೋಧ!

By

Published : May 27, 2023, 9:22 PM IST

ಚೆನ್ನೈ: ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಅಮುಲ್​ ವರ್ಸಸ್​​ ನಂದಿನಿ ಜಟಾಪಟಿ ಈಗ, ತಮಿಳುನಾಡಿನಲ್ಲಿ ಶುರುವಾಗಿದೆ. ಅಮೂಲ್​​ ತನ್ನ ಮಾರುಕಟ್ಟೆಯನ್ನು ತಮಿಳುನಾಡಿನಲ್ಲಿ ವಿಸ್ತರಿಸಲು ಮುಂದಾಗಿದೆ. ಇದರಿಂದ ಅಲ್ಲೂ ಕರ್ನಾಟಕದಂತಹದ್ದೇ ವಿವಾದ ಆರಂಭವಾಗಿದೆ.

ಅಮುಲ್​ ತಮಿಳುನಾಡಿಗೆ ಎಂಟ್ರಿ ಕೊಡಲು ಮುಂದಾಗಿರುವುದು ಅಲ್ಲಿನ ಆವಿನ್‌ ಹಾಲಿಗೆ ಹೊಡೆತ ಕೊಡುತ್ತದೆ ಎಂಬ ಆತಂಕವನ್ನು ತಮಿಳುನಾಡಿಗರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರಂಭದಲ್ಲೇ ಅಮೂಲ್​ ಓಡಿಸಲು ಅಲ್ಲಿನ ಜನ ಮುಂದಾಗಿದ್ದಾರೆ. ತಮಿಳುನಾಡಿನಲ್ಲಿ ಅವಿನ್​ ಹಾಲು ಮಂಡಳಿ ಏಕಸ್ವಾಮ್ಯವನ್ನು ಹೊಂದಿದೆ. ಇನ್ನು ಅಲ್ಲಿನ ಮಂಡಳಿ ಸರಿಯಾದ ಪ್ರಕ್ಯೂರ್​ಮೆಂಟ್​​ ಬೆಲೆ ಹೆಚ್ಚಳ ಮಾಡಿರುವುದು, ಸರಿಯಾಗಿ ಹಾಲು ಸಂಗ್ರಹಣೆ ಮಾಡದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನ ಹೊಂದಿದೆ. ಇಂತಹ ಸಂದರ್ಭದಲ್ಲಿ ಅಮೂಲ್​ ತಮಿಳುನಾಡಿಗೆ ಕಾಲಿಟ್ಟಿದೆ.

ಹೀಗಾಗಿ ತಮಿಳುನಾಡು ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೈನುಗಾರಿಕಾ ಸಚಿವರನ್ನು ಬದಲಿಸಿ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ಹಿಂದಿನ ಸಚಿವ ಎಸ್‌ಎಂ ನಾಜರ್ ಬದಲಿಗೆ ಈಗ ಹೊಸದಾಗಿ ಮನೋ ತಂಗರಾಜ್ ಬಂದಿದ್ದು,ರಾಜ್ಯದಲ್ಲಿ ಆವಿನ್​ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಿಸುವುದಾಗಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಪ್ರಸ್ತುತ ದಿನವೊಂದಕ್ಕೆ 40 ಲಕ್ಷ ಲೀಟರ್​ ಹಾಲಿನ ಸಂಗ್ರಹ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 70 ಲಕ್ಷ ಲೀಟರ್‌ಗೆ (ಎಲ್‌ಎಲ್‌ಪಿಡಿ) ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ನೂತನ ಸಚಿವರು ಭರವಸೆ ನೀಡಿದ್ದಾರೆ. ಆದರೆ ಸಚಿವರು ಹೇಳಿದಂತೆ ಶೇ 50 ರಷ್ಟು ಹಾಲಿನ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಆವಿನ್​ ಹಾಲು ಒಕ್ಕೂಟದ ಅಡಿ 9673 ಹಾಲು ಉತ್ಪಾದಕರ ಸಹಕಾರ ಸಂಘಗಳು ಬರುತ್ತವೆ. ಈ ಸಂಘಗಳ ಒಟ್ಟು ನಾಲ್ಕೂವರೆ ಲಕ್ಷ ಸದಸ್ಯರಿಂದ ದಿನಕ್ಕೆ ಕೇವಲ ಲಕ್ಷ ಲೀಟರ್​ ಹಾಲಿನ ಶೇಖರಣೆ ಮಾಡಲಾಗುತ್ತಿದೆ.

ಇದು ರಾಜ್ಯದ ಹಾಲಿನ ಉತ್ಪಾದನೆಯ ಶೇ.16ರಷ್ಟು ಮಾತ್ರವೇ ಆಗಿದೆ. ಆವಿನ್ ವರ್ಷವಿಡೀ ಏಕರೂಪದ ಲಾಭದಾಯಕ ಬೆಲೆ ನೀಡುವ ಭರವಸೆ ನೀಡುತ್ತದೆ. ರೈತರಿಗೆ ಲೀಟರ್​ಗೆ 32 ರಿಂದ 34 ರೂ. ಮಾತ್ರವೇ ಸಿಗುತ್ತಿದೆ. ಇದು ಯಾವುದಕ್ಕೂ ಸಾಲುವುದಿಲ್ಲ ಎನ್ನುವದು ರೈತರ ಆರೋಪವಾಗಿದೆ. ಇದಷ್ಟೇ ಅಲ್ಲ, ಹಾಲು ಉತ್ಪಾದಕರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿ ಆಗುತ್ತಿಲ್ಲವಂತೆ. ಒಮ್ಮೊಮ್ಮೆ 90 ದಿನಗಳಾದರೂ ಹಣ ಪಾವತಿ ಆಗದೇ ವಿಳಂಬವಾಗುತ್ತದೆ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಇನ್ನು ಆವಿನ್​ ಒಕ್ಕೂಟದಿಂದ ರೈತರಿಗೆ 600 ಕೋಟಿ ರೂ.ಗೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಈ ಆರೋಪವನ್ನು ಆವಿನ್​ ಹಾಲು ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು “ನಾವು ಲೀಟರ್‌ಗೆ 32 ರಿಂದ 36 ರೂ.ವರೆಗೆ ನೀಡುತ್ತೇವೆ. ಗುಣಮಟ್ಟವನ್ನು ಅವಲಂಬಿಸಿ ಇದು ರೂ 42 ರೂವರೆಗೂ ದರ ನೀಡುತ್ತೇವೆ. ಮಾಸಿಕ ಪಾವತಿಯನ್ನು ಪ್ರತಿ ಪೂರೈಕೆದಾರರಿಗೆ ಅವರ ಬ್ಯಾಂಕ್ ಖಾತೆಯ ಮೂಲಕ ತಿಂಗಳ ಹತ್ತನೇ ತಾರೀಖಿನಂದು ವಿತರಿಸಲಾಗುತ್ತದೆ.

ಹತ್ತನೇ ತಾರೀಖು ಭಾನುವಾರದಂದು ಬಂದರೆ, ಶನಿವಾರದಂದು ಪಾವತಿ ಮಾಡಲಾಗುತ್ತದೆ. ಸದ್ಯಕ್ಕೆ ನಾವು ಘಟಕವೊಂದರಿಂದ ದಿನಕ್ಕೆ 3500 ರಿಂದ 4000 ಲೀಟರ್ ಸಂಗ್ರಹಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಆವಿನ್‌ಗೆ ತಮಿಳುನಾಡಿನಲ್ಲಿ ಲೀಟರ್​ ಹಾಲಿಗೆ 44 ರೂ ದರ ವಿಧಿಸುತ್ತಿದೆ. ಅಮುಲ್‌ನ ಹಾಲಿನ ದರ ಲೀಟರ್‌ಗೆ 66 ರೂ. ಇದೆ. ಹೀಗಾಗಿ ಆತಂಕ ಬೇಡ ಎಂಬುದು ಒಕ್ಕೂಟದ ಅಧಿಕಾರಿಗಳ ಮಾತು. ಆದರೆ ಅಮೂಲ್​ ತಮಿಳುನಾಡಿಗೆ ಕಾಲಿಟ್ಟಿರುವುದನ್ನು ಅಲ್ಲಿನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಅಮುಲ್‌ನ ವಿಸ್ತರಣೆ ಯೋಜನೆಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿರುವ ಸ್ಟಾಲಿನ್, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳು ಆವಿನ್ ಹಾಲು ಒಕ್ಕೂಟ, ತನ್ನ ಹಾಲಿನ ಉತ್ಪಾದನೆ ಮತ್ತು ಸಂಗ್ರಹಣೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿವೆ.

ಇದನ್ನು ಓದಿ:"ಏಕ್ ಭಾರತ್ ಶ್ರೇಷ್ಠ ಭಾರತ್‌" ಪರಿಕಲ್ಪನೆಯಲ್ಲಿ ನಿರ್ಮಾಣವಾದ ಸಂಸತ್​ ಭವನ: ಭಾರತದ ಎಲ್ಲೆಡೆಗಳಿಂದ ಸೆಂಟ್ರಲ್ ವಿಸ್ಟಾಗೆ ಕಚ್ಚಾ ವಸ್ತುಗಳ ಬಳಕೆ..

ABOUT THE AUTHOR

...view details