ಕರ್ನಾಟಕ

karnataka

ETV Bharat / bharat

ಏಕಕಾಲದಲ್ಲಿ ಹಾರಾಡಿದ 77 ಸಾವಿರಕ್ಕೂ ಹೆಚ್ಚು ತ್ರಿವರ್ಣಧ್ವಜ; ಪಾಕ್ ದಾಖಲೆ ಮುರಿದ ಭಾರತ - ರಾಷ್ಟ್ರಧ್ವಜಗಳ ಹಾರಾಟ ದಾಖಲೆ

ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಏಕಕಾಲದಲ್ಲಿ 77 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳ ಹಾರಾಟವಾಗಿವೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದರು.

India creates world record
India creates world record

By

Published : Apr 23, 2022, 5:01 PM IST

Updated : Apr 23, 2022, 9:21 PM IST

ಪಾಟ್ನಾ(ಬಿಹಾರ): ಏಕಕಾಲದಲ್ಲಿ 77 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಹಾರಿಸುವ ಮೂಲಕ ಪಾಕಿಸ್ತಾನದ ದಾಖಲೆಯನ್ನು ಭಾರತ ಅಳಿಸಿ ಹಾಕಿದೆ. ಪಾಟ್ನಾದಲ್ಲಿ ಬಾಬು ವೀರ ಕುನ್ವರ್ ಸಿಂಗ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಇಷ್ಟೊಂದು ರಾಷ್ಟ್ರಧ್ವಜಗಳು ಏಕಕಾಲದಲ್ಲಿ ಹಾರಾಡಿದವು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿ ವೀರ್​ ಕುನ್ವರ್ ಸಿಂಗ್​ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಭಾಗಿಯಾದರು. ಈ ವೇಳೆ ರಾಷ್ಟ್ರಧ್ವಜಗಳನ್ನು ಏಕಕಾಲದಲ್ಲಿ ಹಾರಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಏಕಕಾಲದಲ್ಲಿ ಹಾರಾಡಿದ 77 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ

ಇದನ್ನೂ ಓದಿ:ರಾಜಸ್ಥಾನ: ಕೆಡವಿರುವ ಹಿಂದೂ ದೇಗುಲಗಳ ಮರು ನಿರ್ಮಾಣ ಭರವಸೆ

2004ರಲ್ಲಿ ಪಾಕಿಸ್ತಾನ ಏಕಕಾಲಕ್ಕೆ 57,632 ಧ್ವಜಗಳನ್ನು ಹಾರಿಸಿ ದಾಖಲೆ ಬರೆದಿತ್ತು. ಇದೀಗ ಆ ರೆಕಾರ್ಡ್​ ಬ್ರೇಕ್​ ಆಗಿದೆ. ವಿಜಯೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ಅಮಿತ್ ಶಾ ಮಾತನಾಡಿ, ವೀರ್ ಕುನ್ವರ್ ಸಿಂಗ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ವೀರ ಯೋಧರ ಸಾಹಸದ ಬಗ್ಗೆ ಭಾರತದ ಯುವಕರು ಕಲಿಯಬೇಕಾಗಿರುವುದು ತುಂಬಾ ಇದೆ ಎಂದರು.

ಕಾರ್ಯಕ್ರಮದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಸಿಎಂ ತಾರ್​ಕಿಶೋರ್​ ಪ್ರಸಾದ್ ಮತ್ತು ರೇಣು ದೇವಿ, ಕೇಂದ್ರ ಸಚಿವರಾದ ಆರ್​.ಕೆ ಸಿಂಗ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರೀಯ ಗೀತೆ ವಂದೇ ಮಾತರಂ ಪ್ರಸಾರದ ವೇಳೆ ಒಟ್ಟು 5 ನಿಮಿಷಗಳ ಕಾಲ ರಾಷ್ಟ್ರೀಯ ಧ್ವಜ ಹಾರಿಸಲಾಯಿತು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 1987ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರ್ ಕುನ್ವರ್ ಸಿಂಗ್ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

Last Updated : Apr 23, 2022, 9:21 PM IST

ABOUT THE AUTHOR

...view details