ಕರ್ನಾಟಕ

karnataka

ETV Bharat / bharat

ಹೈದರಾಬಾದ್‌ನಲ್ಲಿ 54ನೇ ಸಿಐಎಸ್‌ಎಫ್‌ ಪರೇಡ್‌: ಗೃಹ ಸಚಿವ ಅಮಿತ್ ಶಾ ಭಾಗಿ - ಹೈದರಾಬಾದ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಭಾಗವಹಿಸಿದರು.

Amit Shah attends 54th CISF Raising Day
ಸಿಐಎಸ್‌ಎಫ್‌ ಪರೇಡ್‌ನಲ್ಲಿ ಅಮಿತ್ ಶಾ ಭಾಗಿ

By

Published : Mar 12, 2023, 10:12 AM IST

ಹೈದರಾಬಾದ್ (ತೆಲಂಗಾಣ): ಇಲ್ಲಿನ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿ (ಎನ್‌ಐಎಸ್‌ಎ)ಯಲ್ಲಿಂದು ನಡೆದ 54ನೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನ ಪರೇಡ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡರು. ಈ ವರ್ಷ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವಾರ್ಷಿಕ ಸಂಸ್ಥಾಪನಾ ದಿನಾಚರಣೆಯನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ.

ಇದಕ್ಕೂ ಮುನ್ನ ಶನಿವಾರ, ಸಿಐಎಸ್‌ಎಫ್ ಭಾರತದ ಆಂತರಿಕ ಭದ್ರತೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದೆ ಎಂದು ಅಮಿತ್​ ಶಾ ಬಣ್ಣಿಸಿದ್ದರು. ಅಧಿಕಾರಿಗಳ ಪ್ರಕಾರ, ರಾಷ್ಟ್ರ ರಾಜಧಾನಿ ನವದೆಹಲಿಯ ಹೊರಭಾಗದಲ್ಲಿ ಸಿಐಎಸ್‌ಎಫ್ 'ರೈಸಿಂಗ್ ಡೇ' ಆಚರಣೆ ಮಾಡುತ್ತಿರುವುದು ಇದೇ ಮೊದಲು. ಇದನ್ನು ದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್‌ನಲ್ಲಿರುವ ಸಿಐಎಸ್‌ಎಫ್ ಮೈದಾನದಲ್ಲಿ ನಡೆಸಲಾಗುತ್ತಿತ್ತು. ಕಳೆದ ವರ್ಷ, ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಡೆದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 53ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಅಮಿತ್​​ ಶಾ ಭಾಗವಹಿಸಿದ್ದರು.

ಇದನ್ನೂ ಓದಿ:ಶಿರವಸ್ತ್ರ-ಸಮವಸ್ತ್ರ ಸಂಘರ್ಷ: ತುಮಕೂರಲ್ಲಿ ಪೊಲೀಸ್ ಪರೇಡ್‌,ಕಿಡಿಗೇಡಿಗಳಿಗೆ ಎಚ್ಚರಿಕೆ

ಕಳೆದ ಎರಡು ವರ್ಷಗಳಿಂದ ಎಲ್ಲಾ ಅರೆಸೇನಾ ಪಡೆಗಳು ದೆಹಲಿಯ ಹೊರಗೆ ತಮ್ಮ ಸಂಸ್ಥಾಪನಾ ದಿನಾಚರಿಸುತ್ತಿವೆ. ಮಾರ್ಚ್ 19ರಂದು ಸಿಆರ್‌ಪಿಎಫ್ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ವಾರ್ಷಿಕ ಸಂಸ್ಥಾಪನಾ ದಿನವನ್ನು ಆಚರಿಸುತ್ತದೆ. ಈ ಪ್ರದೇಶ ಒಮ್ಮೆ ನಕ್ಸಲ್ ಪ್ರಾಬಲ್ಯ ಹೊಂದಿತ್ತು.

"ಸಿಐಎಸ್‌ಎಫ್ ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದು, ಅದರ ಎಲ್ಲ ಯೋಧರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು" ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಮಾ.10) ಟ್ವೀಟ್ ಮಾಡಿದ್ದರು. ಪ್ರಮುಖ ಸ್ಥಳಗಳಲ್ಲಿ ದಿನದ 24 ಗಂಟೆಗಳ ಭದ್ರತೆ ಒದಗಿಸಿದ್ದಕ್ಕಾಗಿ ಅವರಿಗೆ ಧನ್ಯವಾದ. ಸಿಐಎಸ್‌ಎಫ್ ಪಡೆ ಕಠಿಣ ಪರಿಶ್ರಮ ಮತ್ತು ವೃತ್ತಿಪರ ದೃಷ್ಟಿಕೋನಕ್ಕೆ ಹೆಸರು ವಾಸಿಯಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಮೋದಿ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಸೇರಿ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ: ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಸಿಐಎಸ್ಎಫ್ ಸಿಬ್ಬಂದಿಗೆ ಸಂಸ್ಥಾಪನಾ ದಿನದಂದು ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶಾ, "ಸಿಐಎಸ್‌ಎಫ್ ಸಿಬ್ಬಂದಿಗೆ ಸಂಸ್ಥಾಪನಾ ದಿನದಂದು ಹಾರ್ದಿಕ ಶುಭಾಶಯಗಳು. ಅವರು ಭಾರತದ ನಿರ್ಣಾಯಕ ಮೂಲಸೌಕರ್ಯಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರದ ಭದ್ರತೆಗೆ ಅವರ ಅಚಲ ಬದ್ಧತೆಯನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದ್ದರು.

ಸಿಐಎಸ್‌ಎಫ್‌(CISF) ಬಗ್ಗೆ ನಿಮಗೆಷ್ಟು ಗೊತ್ತು?: 1969ರ ಮಾ.10ರಂದು ಸಿಐಎಸ್‌ಎಫ್‌ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ಪ್ರತಿ ವರ್ಷ ಮಾ.10ರಂದು ಸಿಐಎಸ್‌ಫ್‌ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಕೇಂದ್ರದ ಪ್ರಮುಖ 5 ಭದ್ರತಾ ಪಡೆಗಳಲ್ಲಿ ಸಿಐಎಸ್‌ಎಫ್‌ ಒಂದಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ಸ್ಥಳಗಳ ಭದ್ರತಾ ಹೊಣೆ ಈ ಪಡೆಯ ಮೇಲಿದೆ.

ಇದನ್ನೂ ಓದಿ:74 ನೇ ಗಣರಾಜ್ಯೋತ್ಸವ:ಸಮವಸ್ತ್ರದೊಂದಿಗೆ ಪರೇಡ್‌ ಪೂರ್ವಾಭ್ಯಾಸ

ABOUT THE AUTHOR

...view details