ಮುಂಬೈ: ಶಿವಸೇನೆ ಮುಖಂಡ, ಸಚಿವ ಏಕನಾಥ್ ಶಿಂದೆ ಅವರ ಬಂಡಾಯದ ಕಾರಣದಿಂದ ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಆದರೆ ಈ ಮಧ್ಯೆ ರಾಜ್ಯದ ಕೆಲ ಇಲಾಖೆಗಳು, ಅದರಲ್ಲೂ ಎನ್ಸಿಪಿ ಹಾಗೂ ಕಾಂಗ್ರೆಸ್ ಹಿಡಿತದಲ್ಲಿರುವ ಇಲಾಖೆಗಳು ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆ ಮಾಡಿವೆ.
ಮಹಾರಾಷ್ಟ್ರ: ಸರ್ಕಾರ ಪತನ ಭೀತಿ ಬೆನ್ನಲ್ಲೇ ಸಾವಿರಾರು ಕೋಟಿ ಯೋಜನೆಗಳಿಗೆ ಮಂಜೂರಾತಿ! - ಏಕನಾಥ್ ಶಿಂದೆ ಬಂಡಾಯ
ಜೂನ್ 20 ರಿಂದ 23 ರ ಅವಧಿಯಲ್ಲಿ ಕನಿಷ್ಠ 182 ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ. ಜೂನ್ 17 ರಂದು ಒಂದೇ ದಿನ 107 ಸರ್ಕಾರಿ ಆದೇಶಗಳು ಹೊರಡಿಸಲಾಗಿದೆ. ಈ ಆದೇಶಗಳನ್ನು ಸರ್ಕಾರದ ವೆಬ್ ಸೈಟಿನಲ್ಲೂ ನೋಡಬಹುದು.
ಜೂನ್ 20 ರಿಂದ 23 ರ ಅವಧಿಯಲ್ಲಿ ಕನಿಷ್ಠ 182 ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ. ಜೂನ್ 17 ರಂದು ಒಂದೇ ದಿನ 107 ಸರ್ಕಾರಿ ಆದೇಶಗಳು ಹೊರಡಿಸಲಾಗಿದೆ. ಈ ಆದೇಶಗಳನ್ನು ಸರ್ಕಾರದ ವೆಬ್ ಸೈಟಿನಲ್ಲೂ ನೋಡಬಹುದು.
ತಾಂತ್ರಿಕವಾಗಿ ಇವನ್ನು ಜಿಆರ್ ಅಥವಾ ಸರ್ಕಾರಿ ಆದೇಶಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಅಭಿವೃದ್ಧಿ ಯೋಜನೆಗಳಿಗಾಗಿ ಹಣ ಬಿಡುಗಡೆ ಮಾಡುವ ಆದೇಶ ಇವಾಗಿರುತ್ತವೆ. ಕಳೆದ ಕೆಲ ದಿನಗಳ ಅವಧಿಯಲ್ಲಿ ಭಾರಿ ಸಂಖ್ಯೆಯ ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿರುವುದು ಸಂಶಯಾಸ್ಪದವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ, ಇದರಲ್ಲಿ ಹಸ್ತಕ್ಷೇಪ ಮಾಡಬೇಕೆಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಇವರಿಗೆ ಮನವಿ ಮಾಡಿದೆ.