ಕರ್ನಾಟಕ

karnataka

ETV Bharat / bharat

ಗೋವಾ ಬೀಚ್​ಗಳಲ್ಲಿ ಕೋವಿಡ್​ ನಿಯಮ ಉಲ್ಲಂಘಿಸಿ ಹೊಸ ವರ್ಷಾಚರಣೆ.. ವಿಡಿಯೋ ವೈರಲ್​

ಭಾರತಾದ್ಯಂತ ಹೆಚ್ಚುತ್ತಿರುವ ಸೋಂಕುಗಳ ಮಧ್ಯೆ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಜನರು ಗೋವಾದ ಜನಪ್ರಿಯ ಬೀಚ್‌ನಲ್ಲಿ ಸೇರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

Covid norms flouted  Goa beach video  Covid norms flouted in Goa  Baga beach video  Goa covid update  Tourists flouting covid norms in Goa  Viral video of Goa beach  ಗೋವಾ ಬೀಚ್​ನಲ್ಲಿ ಕೋವಿಡ್​ ನಿಯಮ ಉಲ್ಲಂಘನೆ  ಗೋವಾ ಬಾಗಾ ಬೀಚ್​ ವಿಡಿಯೋ ವೈರಲ್​ ಕೋವಿಡ್​ ನಿಯಮ ಉಲ್ಲಂಘಿಸಿ ವರ್ಷಾಚರಣೆ  ಗೋವಾ ಕೋವಿಡ್​ ಸುದ್ದಿ
ಗೋವಾ ಬೀಚ್​ಗಳಲ್ಲಿ ಕೋವಿಡ್​ ನಿಯಮ ಉಲ್ಲಂಘಿಸಿ ಹೊಸ ವರ್ಷಾಚರಣೆ

By

Published : Jan 3, 2022, 12:33 PM IST

ಪಣಜಿ (ಗೋವಾ):ಭಾರತಾದ್ಯಂತ ಹೆಚ್ಚುತ್ತಿರುವ ಸೋಂಕುಗಳ ನಡುವೆ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಜನರು ಗೋವಾದ ಜನಪ್ರಿಯ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಉತ್ತರ ಗೋವಾದ ಬಾಗಾ ಬೀಚ್ ಬಳಿಯ ರಸ್ತೆಯೊಂದರಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ನಡೆದುಕೊಂಡು ಹೋಗುತ್ತಿರುವ ಹೊಸ ವರ್ಷ ಆಚರಣೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹರ್ಮನ್ ಗೋಮ್ಸ್ ಎಂಬುವವರು ಭಾನುವಾರ (ಜನವರಿ 2) ತಮ್ಮ ಟ್ವಿಟ್ಟರ್​ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಕಳೆದ ರಾತ್ರಿ ಗೋವಾದ ಬಾಗಾ ಬೀಚ್​ನಲ್ಲಿ ಹೊಸ ವರ್ಷ ಆಚರಣೆ. ದಯವಿಟ್ಟು ಕೋವಿಡ್ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ. ಇದು ಕೋವಿಡ್ ಅಲೆಗೆ ರಾಯಲ್ ಸ್ವಾಗತವಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿದ ಹಲವಾರು ನೆಟಿಜನ್‌ಗಳು ಇದು ‘ಸೂಪರ್‌ಸ್ಪ್ರೆಡರ್’ ಆಗಬಹುದು ಎಂದು ಹೇಳಿದ್ದಾರೆ. ಗೋವಾದಿಂದ ಬರುವ ಪ್ರವಾಸಿಗರಿಗೆ ಮಹಾರಾಷ್ಟ್ರದಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಬೇಕು. ಬಹುಶಃ 7 ದಿನಗಳ ಕ್ವಾರಂಟೈನ್ ಒಳಪಡಿಸಬೇಕೆಂದು ಟ್ವಿಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಭಾನುವಾರ ಗೋವಾದಲ್ಲಿ 3,604 ಪರೀಕ್ಷೆಗಳಲ್ಲಿ 388 ಪ್ರಕರಣಗಳ ಜೊತೆ ಒಂದು ಸಾವು ದಾಖಲಾಗಿದೆ. ಆದರೆ, ಕೋವಿಡ್ ಪಾಸಿಟಿವಿಟಿ ದರವು ಶೇ.10ರಷ್ಟು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್‌ಮಸ್ - ಹೊಸ ವರ್ಷದ ಹಬ್ಬದ ಸೀಸನ್‌ಗಾಗಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಗೋವಾಕ್ಕೆ ಬಂದಿರುವುದು ಕೋವಿಡ್​ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದರು.

ABOUT THE AUTHOR

...view details