ಕರ್ನಾಟಕ

karnataka

ETV Bharat / bharat

ಕೋವಿಡ್‌ನಿಂದ ವಿಮಾನ ಸಂಸ್ಥೆಗಳಿಗೆ ₹19 ಸಾವಿರ ಕೋಟಿ, ಏರ್ಪೋರ್ಟ್‌ಗಳಿಗೆ ₹5 ಸಾವಿರ ಕೋಟಿ ನಷ್ಟ

ವಿಮಾನಯಾನ ಸಂಸ್ಥೆಗಳ ತುರ್ತು ಸಾಲ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಯೋಜನೆಯು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಅರ್ಹ ಸಾಲ ಸೌಲಭ್ಯ ಒದಗಿಸುತ್ತದೆ.

Airlines, airports suffered loss of Rs 19564 crore and Rs. 5116 crore due to pandemic: Govt
ಕೋವಿಡ್‌ನಿಂದ ವಿಮಾನ ಸಂಸ್ಥೆಗಳಿಗೆ 19,564 ಕೋಟಿ, ಏರ್ಪೋರ್ಟ್‌ಗಳಿಗೆ 5,116 ಕೋಟಿ ರೂ.ನಷ್ಟ - ಸರ್ಕಾರ

By

Published : Mar 28, 2022, 6:15 PM IST

Updated : Mar 28, 2022, 6:33 PM IST

ನವದೆಹಲಿ: ಕೋವಿಡ್‌ನಿಂದಾಗಿ 2020-21ರಲ್ಲಿ ದೇಶದ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಸುಮಾರು 19,564 ಮತ್ತು 5,116 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಗೆ ತಿಳಿಸಿದೆ. ಸಾಂಕ್ರಾಮಿಕ ರೋಗ ವಾಯುಯಾನ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ರಾಜ್ಯ ಸಚಿವ ವಿ.ಕೆ.ಸಿಂಗ್‌ ನೀಡಿದ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ವಿಮಾನಯಾನ ಸಂಸ್ಥೆಗಳಿಗೆ ವಿಸ್ತರಿಸಿದೆ. ಈ ಯೋಜನೆಯು ಸಾಲ ನೀಡುವ ಸಂಸ್ಥೆಗಳಿಗೆ ನೂರರಷ್ಟು ಭದ್ರತೆ ನೀಡುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ನಿರ್ಬಂಧವಿಲ್ಲದೆ 2021ರ ಅಕ್ಟೋಬರ್ 18 ರಿಂದ ನಿಗದಿತ ದೇಶೀಯ ವಿಮಾನಗಳ ಹಾರಾಟವನ್ನು ಪುನಾರಂಭಿಸಿದೆ ಎಂದು ಅವರು ಹೇಳಿದರು.

ವಿಮಾನ ದರಗಳನ್ನು ಸರ್ಕಾರ ನಿಯಂತ್ರಿಸುವುದಿಲ್ಲ. ವಿಮಾನ ನಿಯಮಗಳು 1937 ರ ನಿಯಮ 135 ರ ಉಪ ನಿಯಮ (1)ರ ನಿಬಂಧನೆಗಳ ಅಡಿಯಲ್ಲಿ ನಿಗದಿತ ವಿಮಾನ ಸೇವೆಗಳಲ್ಲಿ ತೊಡಗಿರುವ ಪ್ರತಿಯೊಂದು ವಿಮಾನಯಾನ ಸಂಸ್ಥೆಯು ಎಲ್ಲಾ ಸಂಬಂಧಿತ ಸೇವೆಗಳಿಗೆ ದರ ನಿಗದಿ ಮಾಡುತ್ತದೆ ಎಂದು ವಿ.ಕೆ.ಸಿಂಗ್‌ ರಾಜ್ಯಸಭೆಗೆ ತಿಳಿಸಿದರು.

ಇದನ್ನೂ ಓದಿ:ಮಾರ್ಚ್‌ 27ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನಾರಂಭ

Last Updated : Mar 28, 2022, 6:33 PM IST

For All Latest Updates

ABOUT THE AUTHOR

...view details