ಕರ್ನಾಟಕ

karnataka

By

Published : Mar 3, 2023, 5:52 PM IST

ETV Bharat / bharat

ತಂದೆಯನ್ನೇ ಕೊಂದಿರುವ ಮಗ ಪೊಲೀಸರ ಅತಿಥಿಯಾದ..!

ಅಹಮದಾಬಾದ್ ತಂದೆಯ ಹತ್ಯೆ ಪ್ರಕರಣ- ಬೇರೆ ಮಹಿಳೆಯೊಂದಿಗೆ ತಂದೆ ಸಂಬಂಧ ಹೊಂದಿರುವುದನ್ನು ಶಂಕಿಸಿ, ತನ್ನ ತಂದೆಯನ್ನೇ ಮಗ ಹತ್ಯೆಗೈದಿರುವ ಘಟನೆ ನಡೆದಿದೆ.

Ahmedabad Murder
ತಂದೆಯನ್ನೇ ಕೊಂದಿರುವ ಮಗ ಪೊಲೀಸರ ಅತಿಥಿಯಾದ

ಅಹಮದಾಬಾದ್ (ಗುಜರಾತ್​): ಅನುಮಾನದ ಹಿನ್ನೆಲೆ ತಂದೆಯನ್ನೇ ಮಗನು ಕೊಂದು ಹಾಕಿರುವ ಘಟನೆ ಅಹಮದಾಬಾದ್‌ನ ಧೋಲ್ಕಾದಲ್ಲಿ ನಡೆದಿದೆ. ಕೊಲೆ ಮಾಡಿ ಪರಾರಿಯಾಗಲು ಪುತ್ರ ಮಾಸ್ಟರ್ ಪ್ಲ್ಯಾನ್ ಕೂಡಾ ಮಾಡಿದ್ದ. ಪ್ಲ್ಯಾನ್ ಎಲ್ಲಾ ಉಲ್ಟಾ ಹೊಡೆದಿದ್ದರಿಂದ ಮಗ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಪೊಲೀಸರ ಹೆಚ್ಚಿನ ತನಿಖೆಯಿಂದ ಮಗನ ಸಂಪೂರ್ಣ ಪ್ಲ್ಯಾನ್​ ಬಯಲಾಗಿದೆ. ಢೋಲ್ಕಾ ತಾಲೂಕಿನ ಗ್ರಾಮವೊಂದರಲ್ಲಿ ಮಗನೊಬ್ಬ ತಂದೆಯನ್ನು ಬರ್ಬರವಾಗಿ ಹತ್ಯಗೈದಿದ್ದಾನೆ. ತಂದೆ - ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತಂದೆಯು ಮಹಿಳೆಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಮೂಡಿದ್ದರಿಂದ ಮಗನಿಂದ ಹತ್ಯೆ ಪ್ರಕರಣ ನಡೆದಿದೆ. ಆದರೆ, ಪೊಲೀಸರು ಕೊಲೆ ಹಿಂದಿನೆ ನಿಗೂಢವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ:10 ದಿನಗಳ ಹಿಂದೆ, ಅಂದರೆ ಫೆಬ್ರವರಿ 22ರಂದು ಢೋಲ್ಕಾ ತಾಲೂಕಿನ ಬೇಗ್ವಾ ಗ್ರಾಮದ ಬಳಿ (ಬೆಳಗ್ಗೆ) ಭರತ್ ಖೋರ್ಡಿಯಾ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಜಶಿಬೆನ್ ಖೋರ್ಡಿಯಾ ಅವರು, ಕೋಥ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಭರತ್ ಪಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ತಿಳಿದಿದೆ.

ಚುರುಕುಗೊಂಡ ಪೊಲೀಸರ ತನಿಖೆ: ಈ ಹತ್ಯೆ ಪ್ರಕರಣ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಈ ಘಟನೆಯು ಪೊಲೀಸರಿಗೆ ಅನುಮಾನಾಸ್ಪದವಾಗಿದ್ದು, ಸ್ಥಳೀಯ ಪೊಲೀಸರೊಂದಿಗೆ ಗ್ರಾಮಾಂತರ ಎಲ್‌ಸಿಬಿ ಕೂಡ ತನಿಖೆ ಕೈಗೊಂಡಿದೆ. ಮೃತ ಭರತ್ ಪಾಗಿ ತನ್ನ ಮಗ ಮಹೇಂದ್ರ ಪಾಗಿಯೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದರು. ಕೆಲವು ಬಾರಿ ಸಾರ್ವಜನಿಕವಾಗಿ ಜಗಳವಾಡುತ್ತಿದ್ದರು ಎಂದು ಎಲ್​ಸಿಬಿಗೆ ಮಾಹಿತಿ ದೊರೆತಿದೆ. ಮೃತರ ಮಗ ಮಹೇಂದ್ರ ಪಾಗಿಯನ್ನು ವಿಚಾರಣೆಗೊಳಪಡಿಸಿದಾಗ, ಆರೋಪಿ ಪುತ್ರ ವಾಹನದಿಂದ ಡಿಕ್ಕಿ ಹೊಡಿಸಿ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂಬುದು ಎಲ್​ಸಿಬಿಯವರು ಈ ಬಗ್ಗೆ ಕೂಲಂಕಷವಾಗಿ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.

ವಾಹನ ಡಿಕ್ಕಿ ಹೊಡೆಸಿ ತಂದೆಯ ಹತ್ಯೆ ಮಾಡಿದ ಮಗ:ಆರೋಪಿ ಮಹೇಂದ್ರ ಪಾಗಿ ತನ್ನ ತಂದೆ ಭರತ್ ಪಾಗಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು. ಘಟನೆ ನಡೆದ ದಿನವೂ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಮಹೇಂದ್ರ ಮನೆಯ ಹೊರಗೆ ಬಿದ್ದಿದ್ದ ಕೋಲಿನಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ತಂದೆ ಭರತ್ ಪಾಗಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಆರೋಪಿ ಸಿಕ್ಕಿಬೀಳಬಹುದೆಂಬ ಭಯದಿಂದ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ, ವಾಹನದಿಂದ ಡಿಕ್ಕಿ ಹೊಡೆದು ಮತ್ತಷ್ಟು ಗಾಯ ಮಾಡಲಾಗಿದೆ ಎಂದು ತಾಯಿಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ, ಅದು ಆಕಸ್ಮಿಕ ಸಾವು ಎಂದು ದೂರು ದಾಖಲು ಮಾಡಲಾಗಿತ್ತು. ಈ ಇಡೀ ವಿಚಾರದಲ್ಲಿ ಆರೋಪಿ ಮಗ ತನ್ನ ತಂದೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿರುವುದು ಕೂಡ ಬಯಲಾಗಿದೆ. ಇಡೀ ಗ್ರಾಮದಲ್ಲಿ ಕೊಲೆ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಹಮದಾಬಾದ್ ಜಿಲ್ಲಾ ಎಸ್ಪಿ ಹೇಳಿದ್ದೇನು:ಕೋಠ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಾಹಿತಿಯ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆದಿರುವುದರಿಂದ ಕೊಲೆ ಪ್ರಕರಣ ಜರುಗಿರುವುದು ಬೆಳಕಿಗೆ ಬಂದಿದೆ. ಆದಾಗ್ಯೂ, ಈ ಪ್ರಕರಣದಲ್ಲಿ ಆರೋಪಿಯ ಹೆಚ್ಚಿನ ವಿಚಾರಣೆ ಮತ್ತು ಇತರ ವಿಚಾರಗಳ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ ಎಂದು ಅಹಮದಾಬಾದ್ ಜಿಲ್ಲಾ ಎಸ್ಪಿ ಅಮಿತ್ ಕುಮಾರ್ ವಾಸವ ತಿಳಿಸಿದರು.

ಇದನ್ನೂ ಓದಿ:ಫರಿದಾಬಾದ್‌ನಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿ ದುರ್ಮರಣ

ABOUT THE AUTHOR

...view details