ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ಪಂಜಾಬಿ ನಟ, ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ಸಾವು! - ನಟ ದೀಪ್​ ಸಿಧು ಸುದ್ದಿ

ಪಂಜಾಬಿ ನಟ ಮತ್ತು ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿಯೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಸೋನಿಪತ್​ ಜಿಲ್ಲೆಯಲ್ಲಿ ನಡೆದಿದೆ.

Actor Deep Sidhu died in road accident, Red Fort violence case accused died, Punjabi dies in road accident, Actor Deep Sidhu news, Actor Deep Sidhu died news, ರಸ್ತೆ ಅಪಘಾತದಲ್ಲಿ ನಟ ದೀಪ್​ ಸಿಧು ಸಾವು, ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ಸಾವು, ನಟ ದೀಪ್​ ಸಿಧು ಸುದ್ದಿ, ನಟ ದೀಪ್​ ಸಿಧು ಸಾವು ಸುದ್ದಿ,
ಪಂಜಾಬಿ ನಟ

By

Published : Feb 15, 2022, 10:58 PM IST

ಸೋನಿಪತ್( ಪಂಜಾಬ್​): 2021ರ ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ಪಂಜಾಬಿ ನಟ ದೀಪ್ ಸಿಧು ಹರಿಯಾಣದ ಸೋನಿಪತ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಪಂಜಾಬಿ ನಟ ದೀಪ್​ ಸಿಧು ಅಪಘಾತದಲ್ಲಿ ಸಾವನ್ನಪ್ಪಿರುವುದನ್ನು ಸೋನಿಪತ್ ಪೊಲೀಸರು ಖಚಿತಪಡಿಸಿದ್ದಾರೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ 'ಮುಖ್ಯ ಪ್ರಚೋದಕ' ಎಂದು ದೆಹಲಿ ಪೊಲೀಸರು ಫೆಬ್ರವರಿ 9, 2021 ರಂದು ಹರಿಯಾಣದ ಕರ್ನಾಲ್ ಬೈಪಾಸ್‌ನಿಂದ ಸಿಧುವನ್ನು ಬಂಧಿಸಲಾಯಿತು.

ಓದಿ:ಘಂಟೆ ಶಬ್ದ ಕಡಿಮೆ ಮಾಡುವಂತೆ ದೇವಾಲಯಕ್ಕೆ ಯಾವುದೇ ನೋಟಿಸ್​ ಬಂದಿಲ್ಲ: ಆನಂದ್ ಸಿಂಗ್ ಸ್ಪಷ್ಟನೆ

ಬಂಧನದಲ್ಲಿದ್ದಾಗ, ಗಣರಾಜ್ಯೋತ್ಸವದಂದು ಐತಿಹಾಸಿಕ ಸ್ಮಾರಕದಲ್ಲಿ ತೆರೆದುಕೊಂಡ ಘಟನೆಗಳ ದೃಶ್ಯವನ್ನು ಮರುಸೃಷ್ಟಿಸಲು ಸಿಧು ಮತ್ತು ಇನ್ನೊಬ್ಬ ಆರೋಪಿ ಇಕ್ಬಾಲ್ ಸಿಂಗ್​ರನ್ನು ಕೆಂಪು ಕೋಟೆಗೆ ಕರೆದೊಯ್ಯಲಾಯಿತು.

ದೀಪ್ ಸಿಧು ಅವರು ಧ್ವಜ ಮತ್ತು ದೊಣ್ಣೆಗಳೊಂದಿಗೆ ಕೆಂಪು ಕೋಟೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಸಿಧು ಜನರನ್ನು ಪ್ರಚೋದಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದರು.

ಜನವರಿ 26 ರಂದು ಮೂರು ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್ ಜಾಥಾದಲ್ಲಿ ಪ್ರತಿಭಟನಾ ನಿರತ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಘರ್ಷಣೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರ ಒಂದು ವಿಭಾಗವು ಕೆಂಪು ಕೋಟೆಗೆ ಪ್ರವೇಶಿಸಿ ಧಾರ್ಮಿಕ ಧ್ವಜವನ್ನು ಹಾರಿಸಿತ್ತು.

ABOUT THE AUTHOR

...view details