ಕರ್ನಾಟಕ

karnataka

By

Published : Mar 21, 2022, 11:58 AM IST

ETV Bharat / bharat

ರಾಜ್ಯಸಭೆಗೆ ಪಂಜಾಬ್​ನಿಂದ ಹರ್ಭಜನ್ ಸಿಂಗ್​ ಸೇರಿ ಐವರ ನಾಮ ನಿರ್ದೇಶನ

ಇತ್ತೀಚಿಗೆ ನಡೆದ ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇತ್ತ, ಪಂಜಾಬ್​ನ ಐದು ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.

harbhajan singh
harbhajan singh

ನವದೆಹಲಿ: ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿರುವ ಆಮ್​ ಆದ್ಮಿ ಪಕ್ಷವು ಮುಂಬರುವ ರಾಜ್ಯಸಭಾ ಚುನಾವಣೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​ ಸೇರಿ ಐವರನ್ನು ನಾಮನಿರ್ದೇಶನ ಮಾಡಲು ಉದ್ದೇಶಿಸಿದೆ.

ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇತ್ತ, ಪಂಜಾಬ್​ನ ಐದು ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ರಾಜ್ಯಸಭೆಯ ಐದು ಸ್ಥಾನಗಳು ಆಮ್​ ಆದ್ಮಿ ಪಕ್ಷಕ್ಕೆ ಬೋನಸ್​​ ರೂಪದಲ್ಲಿ ಸಿಕ್ಕಿವೆ. ಆದ್ದರಿಂದ ಪಂಜಾಬ್‌ನಿಂದ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ ಮತ್ತು ಡಾ.ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಸಂಜೀವ್ ಅರೋರಾ ಅವರನ್ನು ನಾಮನಿರ್ದೇಶನ ಮಾಡಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದೆ.

ಪ್ರಸ್ತುತ ಪಂಜಾಬ್​ನಿಂದ ಆಯ್ಕೆಯಾಗಿರುವ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯರಾದ ಪ್ರತಾಪ್​ ಸಿಂಗ್​ ಬಜ್ವಾ ಮತ್ತು ಸಮ್ಶೇರ ಸಿಂಗ್​ ದುಲ್ಲೋ, ಶಿರೋಮಣಿ ಅಕಾಲಿ ದಳದ ಸದಸ್ಯರಾದ ಸುಖ್​ದೇವ್​ ಸಿಂಗ್​ ಧಿಂಡ್ಸಾ ಮತ್ತು ನರೇಶ್ ಗುಜ್ರಾಲ್ ಹಾಗೂ ಬಿಜೆಪಿಯ ಶ್ವೈತ್ ಮಲಿಕ್ ನಿವೃತ್ತಿ ಹೊಂದುತ್ತಿದ್ದಾರೆ. ಈ ಸ್ಥಾನಗಳಿಗೆ ಆಪ್ ತನ್ನ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಿದೆ.

ಇದನ್ನೂ ಓದಿ:ಮಾ.24ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ.. 25ರಂದು ಯೋಗಿ ಆದಿತ್ಯನಾಥ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

ABOUT THE AUTHOR

...view details