ಹೈದರಾಬಾದ್ (ತೆಲಂಗಾಣ):ತನ್ನ ಪ್ರೇಯಸಿಗಾಗಿ ಪಿಜ್ಜಾ ನೀಡಲು ಟೆರೇಸ್ ಮೇಲೆ ಬಂದಿದ್ದ ಪ್ರಿಯಕರ, ಆಕೆಯ ತಂದೆಯನ್ನು ಕಂಡು 4 ನೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ ಘಟನೆ ಭಾನುವಾರ (6/08/2023) ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಬೋರಬಂಡ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ, ಮೃತ ಶೋಯೆಬ್ (20) ಹೈದರಾಬಾದ್‌ನ ಬೋರಬಂಡ ಪ್ರದೇಶದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಪ್ರೇಯಸಿಗಾಗಿ ಟೆರೇಸ್ ಮೇಲೆ ಹೋಗಿ ಪಿಜ್ಜಾ ಕೊಟ್ಟ ಪ್ರೇಮಿ.. ಆಕೆಯ ತಂದೆಯನ್ನು ಕಂಡು 4ನೇ ಮಹಡಿಯಿಂದ ಜಿಗಿದವನು ಸಾವು - Hyderabad
ಹೈದರಾಬಾದ್ನಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಗಾಗಿ ಆಕೆಯ ಮನೆಯ ಟೆರೇಸ್ ಮೇಲೆ ಪಿಜ್ಜಾ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಗೆಳತಿಯ ತಂದೆ ಬಂದರೆಂದು ಪಾರಾಗಲು ಅದೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ್ದಾನೆ.
ಈತನಿಗೆ ಇತ್ತೀಚೆಗೆ ಸ್ಥಳೀಯ ಯುವತಿಯೊಬ್ಬಳು ಪರಿಚಯವಾಗಿದ್ದಳು. ಇವರಿಬ್ಬರ ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಹೀಗೆ ಇವರ ಕಹಾನಿ ಮುಂದುವರೆದಿದೆ. ಮೊನ್ನೆ ಶನಿವಾರ ಅಂದರೆ, 5ಕ್ಕೆ ರಾತ್ರಿ ಪ್ರೇಯಸಿಯು ಪಿಜ್ಜಾ ಕೇಳಿದ್ದಾಳೆ. ಶೋಯೆಬ್ ಭಾನುವಾರ ಮಧ್ಯರಾತ್ರಿ ಪಿಜ್ಜಾ ತೆಗೆದುಕೊಂಡು ಯುವತಿಯ ಮನೆಯ ಟೆರೇಸ್ಗೆ ಹೋಗಿ ಮಾತನಾಡುತ್ತಿದ್ದ. ಈ ವೇಳೆ ಯುವತಿಯ ತಂದೆ ಮಹಡಿ ಮೇಲೆ ಬಂದಿದ್ದಾರೆ. ಇದರಿಂದ ಭಯಭೀತನಾದ ಶೋಯೆಬ್ ತಕ್ಷಣಕ್ಕೆ ಆಲೋಚಿಸದೇ ತಾನಿದ್ದ 4ನೇ ಮಹಡಿಯಿಂದ ಜಿಗಿದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಸ್ಥಳೀಯರು ಸೇರಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಭಾನುವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಕಲಬುರಗಿ: ಪಬ್ ಜಿ ಆಟದಲ್ಲಿ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು