ಲಖನೌ( ಉತ್ತರಪ್ರದೇಶ): ಕೈಸರ್‌ಬಾಗ್‌ನ ಬೆಂಗಾಲಿ ತೋಲಾ ನಿವಾಸಿಯೊಬ್ಬರು ತಮ್ಮ ಸಾಕು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಸುಶೀಲಾ ತ್ರಿಪಾಠಿ (82) ಅವರನ್ನು ಬಲರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸುಶೀಲಾ ತ್ರಿಪಾಠಿ ಅವರು ತಮ್ಮ ಕುಟುಂಬದ ಜೊತೆ ಎರಡು ಸಾಕು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಈ ಕುಟುಂಬವು ಲ್ಯಾಬ್ರಡಾರ್ ಮತ್ತು ಪಿಟ್ಬುಲ್ ಎಂಬ ನಾಯಿಗಳನ್ನು ಹೊಂದಿತ್ತು. ಮಂಗಳವಾರ ಬೆಳಗ್ಗೆ ತ್ರಿಪಾಠಿಯವರು ನಾಯಿಗಳ ಜೊತೆ ವಾಕಿಂಗ್ಗೆ ಹೋಗಿದ್ದಾಗ ಪಿಟ್‌ಬುಲ್ ಸುಶೀಲಾ ತ್ರಿಪಾಠಿ ಮೇಲೆ ದಾಳಿ ಮಾಡಿದೆ. ಆದರೆ, ನಾಯಿ ಮಾಲೀಕರಿಗೆ ವಯಸ್ಸಾದ ಕಾರಣ ಚೀರಾಡುವುದನ್ನು ಬಿಟ್ಟು ಬೇರೇನೂ ಮಾಡಲಾಗಿಲ್ಲ. ಪರಿಣಾಮ ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.