ಕೋಯಿಕ್ಕೋಡ್ (ಕೇರಳ): ಮೊಟ್ಟೆ ಮೊದಲ? ಕೋಳಿ ಮೊದಲ? ಎಂಬ ಪ್ರಶ್ನೆಯೇ ಇನ್ನೂ ಕಗ್ಗಂಟಾಗಿ ಉಳಿದಿದೆ. ಅಲ್ಲದೇ ಸಾಮಾನ್ಯವಾಗಿ ಕೋಳಿ ಒಂದು ದಿನದಲ್ಲಿ ಒಂದೇ ಮೊಟ್ಟೆ ಇಡುತ್ತದೆ. ಹೀಗಿರುವಾಗ ಇಲ್ಲೊಂದು ಕೋಳಿ ದಿನವೊಂದರಲ್ಲಿ 11 ಮೊಟ್ಟೆಗಳನ್ನ ಇಟ್ಟು ಜನರನ್ನು ಬೆರಗಾಗಿಸಿದೆ.
ಇದೆಂಥ ವಿಸ್ಮಯ..! ಒಂದೇ ದಿನಕ್ಕೆ ಇಷ್ಟೊಂದು ಮೊಟ್ಟೆ ಇಟ್ಟಿತು ನಾಟಿ ಕೋಳಿ..!! - kerala news
ಕೇರಳದ ಕೋಯಿಕ್ಕೋಡ್ನಲ್ಲಿ ನಾಟಿ ಕೋಳಿಯೊಂದು ಒಂದೇ ದಿನ 11 ಮೊಟ್ಟೆಗಳನ್ನ ಇಟ್ಟಿದ್ದು, ಎಲ್ಲರೂ ಆಶ್ಚರ್ಯಚಕಿತರಾಗುವಂತೆ ಮಾಡಿದೆ.
ಕೇರಳದ ಕೋಯಿಕ್ಕೋಡ್ನ ಕೊಲಾಥೂರ್‌ನ ನಿವಾಸಿ ಮನೋಜ್ ಎಂಬುವರ ಮನೆಯ ಕೋಳಿ ಹೀಗೆ ಚಮತ್ಕಾರ ಎಂಬಂತೆ 11 ಮೊಟ್ಟೆಗಳನ್ನಿಟ್ಟಿದೆ. ಮನೋಜ್ ನಾಲ್ಕು ತಿಂಗಳ ಹಿಂದೆ ಕಪ್ಪುರಂನಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ಕೋಳಿಯೊಂದನ್ನು ತಂದು ಅದಕ್ಕೆ ಕರುತಮ್ಮ ಎಂದು ಹೆಸರಿಟ್ಟದ್ದರು. ಇದು ಕಳೆದ ಗುರುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ಒಳಗೆ ಹತ್ತು ಮೊಟ್ಟೆಗಳನ್ನು ಗೂಡಿನೊಳಗೆ ಹಾಗೂ 1 ಮೊಟ್ಟೆಯನ್ನು ಹೊರಗಡೆ ಇಟ್ಟಿದೆಯಂತೆ.
ಈ ಬಗ್ಗೆ ವಿಚಾರಿಸಲು ಮನೋಜ್ ಕುಟುಂಬವು ಪಶುವೈದ್ಯರನ್ನು ಸಂಪರ್ಕಿಸಿದ್ದಾರೆ. ಹಾರ್ಮೋನುಗಳ ಬದಲಾವಣೆಯಿಂದ ಇದು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳೀಯರು ಆಶ್ಚರ್ಯಚಕಿತರಾಗಿದ್ದರೆ, ಕುಟುಂಬಸ್ಥರು ಇದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.