ಪೂರ್ವ ಗೋದಾವರಿ( ಆಂಧ್ರಪ್ರದೇಶ): ಕೆಲವೊಮ್ಮೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದವರನ್ನು ದಾರಿಹೋಕರು ಹಾಗೂ ವಾಹನ ಸವಾರರು ನೋಡಿ ನೋಡದಂತೆ ಹೋಗುವುದನ್ನು ಸಾಕಷ್ಟು ಬಾರಿ ಗಮನಿಸಿರುತ್ತೇವೆ. ಆದರೆ, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿರುವ ಅಪರೂಪದ ಘಟನೆ ನಡೆದಿದೆ.
Stitches to snake: ರಾಜಮಹೇಂದ್ರವರಂ ನಗರದಲ್ಲಿ ರಸ್ತೆ ದಾಟುತ್ತಿದ್ದ ಐದೂವರೆ ಅಡಿ ಉದ್ದದ ನಾಗರ ಹಾವಿನ ಮೇಲೆ ದ್ವಿಚಕ್ರ ವಾಹನ ಹರಿದಿದೆ. ಈ ವೇಳೆ, ಹಾವಿನ ದವಡೆಗೆ ತೀವ್ರವಾಗಿ ಗಾಯವಾಗಿ ಒಂದು ಗಂಟೆ ಕಾಲ ರಸ್ತೆಯಲ್ಲೇ ಬಿದ್ದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಜೈನ ಸೇವಾ ಸಮಿತಿ ಅಧ್ಯಕ್ಷ, ಉರಗ ರಕ್ಷಕ ವಿಕ್ರಮ್ ಜೈನ್ ಹಾವನ್ನು ವನ್ಯ ಪ್ರಾಣಿ ವಿಭಾಗದ ಆಸ್ಪತ್ರೆಗೆ ತಂದು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.