ಮಲಪ್ಪುರಂ (ಕೇರಳ): ಫ್ರೀಸ್ಟೈಲ್ ಫುಟ್ಬಾಲ್ ಇಷ್ಟು ಕಠಿಣವೋ, ಅಷ್ಟೇ ಜನಪ್ರಿಯ ಕಲೆಯೂ ಹೌದು. ಮರಡೋನಾ ಮತ್ತು ರೊನಾಲ್ಡೊ ಅವರಂತಹ ದಿಗ್ಗಜ ಆಟಗಾರರು ಫ್ರೀಸ್ಟೈಲ್ ಕಲೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಕೇರಳದ ಯುವಕನೊಬ್ಬ ಕೂಡ ಫ್ರೀಸ್ಟೈಲ್ ಫುಟ್ಬಾಲ್ ಕಲೆಯಿಂದ ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮಂಕಡವು ಮೂಲದ ಮಹಮ್ಮದ್ ರಿಜ್ವಾನ್ ಫ್ರೀಸ್ಟೈಲ್ ಫುಟ್ಬಾಲ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ತನ್ನ ಫ್ರೀಸ್ಟೈಲ್ ವಿಡಿಯೋಗಳು ಹುಚ್ಚು ಎಬ್ಬಿಸುತ್ತಿದ್ದು, ಅಪಾರ ಅಭಿಮಾನಿಗಳನ್ನೂ 19 ವರ್ಷದ ರಿಜ್ವಾನ್ ಗಳಿಸುತ್ತಿದ್ದಾನೆ. ಬೆರಳ ತುದಿ ಹಾಗೂ ಕುತ್ತಿಗೆ ಮೇಲೆ ಚೆಂಡನ್ನು ಸರಾಗವಾಗಿ ಸುತ್ತಿಸುತ್ತಾರೆ. ಮೊಬೈಲ್ ತುದಿಯ ಮೇಲೂ ಚೆಂಡು ತಿರುಗಿಸುವ ಈ ಯುವಕ, ನದಿಯ ಸೇತುವೆ ಮೇಲೆ ಕುಳಿತು ಕೂಡ ಕಾಲ್ಚೆಂಡಾಟ ಆಡುವಷ್ಟು ಕೌಶಲ್ಯ ಹೊಂದಿದ್ದಾರೆ.