ಔರಂಗಾಬಾದ್: 10ನೇ ತರಗತಿಯ ವಿದ್ಯಾರ್ಥಿಯನ್ನು ನಾಸಾ ಪ್ಯಾನಲಿಸ್ಟ್ ಆಗಿ ಆಯ್ಕೆ ಮಾಡಿಕೊಂಡಿದೆ. ಆಶ್ಚರ್ಯವಾದರೂ ಇದು ಸತ್ಯ. 14 ವರ್ಷದ ದೀಕ್ಷಾ ಶಿಂಧೆ ವಿಶಿಷ್ಟ ಸಾಧನೆ ಮಾಡಿ ನಾಸಾದ ಈ ಗೌರವಕ್ಕೆ ಕಾರಣರಾಗಿದ್ದಾರೆ. ದೀಕ್ಷಾ ಕಪ್ಪು ಕುಳಿ ಮತ್ತು ದೇವರ ಅಸ್ತಿತ್ವದ ಕುರಿತು ಸಂಶೋಧನಾ ಪ್ರಬಂಧ ಬರೆದಿದ್ದು, ಈ ಲೇಖನವನ್ನು ಪರಿಶೀಲಿಸಿದ ನಂತರ ನಾಸಾ ಈಕೆಯನ್ನು ಪ್ಯಾನಲಿಸ್ಟ್ ಆಗಿ ಆಯ್ಕೆ ಮಾಡಿದೆ.
ನಾಸಾದಲ್ಲಿ ಪ್ಯಾನಲಿಸ್ಟ್ ಆಗಿ ಆಯ್ಕೆಯಾದ 10ನೇ ತರಗತಿ ವಿದ್ಯಾರ್ಥಿನಿ - ದೇವರು, ಕಪ್ಪು ಕುಳಿಗಳು ಮತ್ತು ದೇವರ ಅಸ್ತಿತ್ವ
ನಾಸಾದ ಎಂಎಸ್‌ಐ ಫೆಲೋಶಿಪ್ ವರ್ಚುವಲ್ ಪ್ಯಾನಲ್‌ನಲ್ಲಿ ಆರು ತಿಂಗಳ ಕಾಲ ದೀಕ್ಷಾ ಪ್ಯಾನಲಿಸ್ಟ್ ಆಗಿ ತಮ್ಮ ಪ್ರತಿಭೆ ತೋರಿಸಲಿದ್ದಾರೆ. ದೀಕ್ಷಾ ಅವರಿಗೆ ನಾಸಾದಲ್ಲಿ ಸಂಶೋಧನಾ ಯೋಜನೆಗಳನ್ನು ಪರಿಶೀಲಿಸುವ ಮತ್ತು ಸಲಹೆಗಳನ್ನು ನೀಡುವ ಕೆಲಸ ನೀಡಲಾಗಿದೆ. ಆರು ತಿಂಗಳವರೆಗೆ ಇವರು ₹50,000 ಗೌರವಧನ ಸಹ ಪಡೆಯಲಿದ್ದಾರೆ..
ನಾಸಾದ ಎಂಎಸ್‌ಐ ಫೆಲೋಶಿಪ್ ವರ್ಚುವಲ್ ಪ್ಯಾನಲ್‌ನಲ್ಲಿ ಆರು ತಿಂಗಳ ಕಾಲ ದೀಕ್ಷಾ ಪ್ಯಾನಲಿಸ್ಟ್ ಆಗಿ ತಮ್ಮ ಪ್ರತಿಭೆ ತೋರಿಸಲಿದ್ದಾರೆ. ದೀಕ್ಷಾ ಅವರಿಗೆ ನಾಸಾದಲ್ಲಿ ಸಂಶೋಧನಾ ಯೋಜನೆಗಳನ್ನು ಪರಿಶೀಲಿಸುವ ಮತ್ತು ಸಲಹೆಗಳನ್ನು ನೀಡುವ ಕೆಲಸ ನೀಡಲಾಗಿದೆ. ಆರು ತಿಂಗಳವರೆಗೆ ಇವರು ₹50,000 ಗೌರವಧನ ಸಹ ಪಡೆಯಲಿದ್ದಾರೆ.
ಇನ್ನು, ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವ ಸಮ್ಮೇಳನಕ್ಕೆ ನಾಸಾ ದೀಕ್ಷಾ ಅವರನ್ನು ಆಹ್ವಾನಿಸಿದೆ. ಈಕೆ ದೇವರು, ಕಪ್ಪು ಕುಳಿಗಳು ಮತ್ತು ದೇವರ ಅಸ್ತಿತ್ವದ ಕುರಿತು ಒಂದು ಲೇಖನವನ್ನು ನಾಸಾಗೆ ಕಳುಹಿಸಿದ್ದಾರೆ. ಕೊನೆಗೆ ದೇವರು ಇಲ್ಲ ಎಂದು ಆಕೆ ಕಂಡುಕೊಂಡಿದ್ದಾರೆ. ಈಕೆಯ ಶಾಸ್ತ್ರೀಯ ಬರವಣಿಗೆಯನ್ನು ನಾಸಾದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.