ಅಯೋಧ್ಯೆ(ಉತ್ತರ ಪ್ರದೇಶ): ಜೈಲು ಸೇರಿದ್ದ 98 ವರ್ಷದ ವೃದ್ಧ ರಾಮ್ ಸೂರತ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆ ಜೈಲಿನಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಜೈಲು ಸಿಬ್ಬಂದಿ ಅವರನ್ನು ಬೀಳ್ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ವಿಡಿಯೋದಲ್ಲಿ ಜೈಲು ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ಸೂರತ್ ಅವರಿಗೆ ಎಸ್ಕಾರ್ಟ್ ನೀಡಿ (ಬೆಂಗಾವಲು) ಮನೆಗೆ ತಲುಪಿಸಿದ್ದಾರೆ. ಈ ವಿಡಿಯೋವನ್ನು ಉತ್ತರ ಪ್ರದೇಶ ಕಾರಾಗೃಹ ಇಲಾಖೆ ಡಿಜಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ವೇಳೆ ರಾಮ್ ಸೂರತ್ ಅವರ ಯಾವುದೇ ಸಂಬಂಧಿಗಳು ಹಾಜರಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಜೈಲಿನಿಂದ 98 ವರ್ಷದ ವೃದ್ಧ ಬಿಡುಗಡೆ: ಬೆಂಗಾವಲಿನೊಂದಿಗೆ ಕಳುಹಿಸಿಕೊಟ್ಟ ಪೊಲೀಸರು!
ಐದು ವರ್ಷಗಳ ಕಾಲ ಉತ್ತರ ಪ್ರದೇಶದ ಅಯೋಧ್ಯೆ ಜೈಲಿನಲ್ಲಿದ್ದ 98 ವರ್ಷದ ವೃದ್ಧನನ್ನು ಬಿಡುಗಡೆ ಮಾಡಲಾಗಿದೆ.
ರಾಮ್ ಸೂರತ್
‘ರಾಮ್ ಸೂರತ್ ಅವರು ಐಪಿಸಿ ಸೆಕ್ಷನ್ 452, 323, 352 ಅಡಿ ಐದು ವರ್ಷ ಜೈಲು ಶಿಕ್ಷೆಗೊಳಗಾಗಿದ್ದರು. 2022 ರ ಆಗಸ್ಟ್ 8 ರಂದು ಇವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಮೇ 20 ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಹಾಗಾಗಿ ಸೂರತ್ ಅವರನ್ನು 90 ದಿನಗಳವರೆಗೆ ಪೆರೋಲ್ಗೆ ಕಳುಹಿಸಲಾಗಿತ್ತು’ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದರು.
ಇದನ್ನೂ ಓದಿ:ಬೀದರ್ ಉತ್ಸವದಲ್ಲಿ ಕುಮಾರ್ ಸಾನು ಗಾನಸುಧೆ- ವಿಡಿಯೋ