ಕರ್ನಾಟಕ

karnataka

ETV Bharat / bharat

ಯುರೋಪಿನ ಅತಿ ಎತ್ತರದ ಶಿಖರ ಏರಿದ ಆಂಧ್ರದ 8 ವರ್ಷದ ಬಾಲಕ

ಗಂಧಮ್ ಭುವನ್ ಜೈ ಎಂಬ ಬಾಲಕ ಸೆಪ್ಟೆಂಬರ್ 18 ರಂದು ಮೌಂಟ್ ಎಲ್ಬ್ರಸ್ (5642 ಮೀಟರ್) ಶಿಖರವನ್ನು ಇತರ ಇಬ್ಬರು ಪರ್ವತಾರೋಹಿಗಳ ಜತೆ ತಲುಪಿದ್ದಾನೆ.

8-Year-Old Andhra Boy Becomes The Youngest to Scale Mount Elbrus
ಯುರೋಪಿನ ಅತಿ ಎತ್ತರದ ಶಿಖರ ಮೌಂಟ್ ಎಲ್ಬ್ರಸ್ ಏರಿದ ಆಂಧ್ರದ 8 ವರ್ಷದ ಬಾಲಕ

By

Published : Sep 21, 2021, 8:29 PM IST

ಕರ್ನೂಲ್ (ಆಂಧ್ರಪ್ರದೇಶ):ಆಂಧ್ರಪ್ರದೇಶದ ಕರ್ನೂಲಿನ 8 ವರ್ಷದ ಬಾಲಕ ಯುರೋಪಿನ ಅತಿ ಎತ್ತರದ ಶಿಖರ ಮತ್ತು ಪ್ರಪಂಚದ ಅತ್ಯಂತ ಎತ್ತರದ ಏಳು ಶಿಖರಗಳಲ್ಲಿ ಒಂದಾದ ಮೌಂಟ್ ಎಲ್ಬ್ರಸ್ ಏರುವ ಮೂಲಕ ಸಾಧನೆಗೈದಿದ್ದಾನೆ. ಈತ ಈ ಶಿಖರ ಏರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಗಂಧಮ್ ಭುವನ್ ಜೈ ಎಂಬ ಬಾಲಕ ಸೆಪ್ಟೆಂಬರ್ 18 ರಂದು ಮೌಂಟ್ ಎಲ್ಬ್ರಸ್ (5642 ಮೀಟರ್) ಶಿಖರವನ್ನು ಇತರ ಇಬ್ಬರು ಪರ್ವತಾರೋಹಿಗಳ ಜತೆ ತಲುಪಿದ್ದಾನೆ. ವೈಜಾಗ್‌ನ ಅನ್ಮಿಶ್ ವರ್ಮ ಮತ್ತು ಅನಂತಪುರದ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ನ (ಆರ್‌ಡಿಟಿ) ಕ್ರೀಡಾ ತರಬೇತುದಾರ ಕೆ.ಶಂಕರಯ್ಯ ಅವರು ಜೈಗೆ ಸಾಥ್​ ನೀಡಿದ್ದಾರೆ.

ಶಿಖರ ಮುಟ್ಟಿದ ನಂತರ ಭುವನ್ ಹೆಮ್ಮೆಯಿಂದ ಒಂದು ಬದಿಯಲ್ಲಿ ಸಂವಿಧಾನದ ಮುನ್ನುಡಿ ಮತ್ತು ಇನ್ನೊಂದು ಬದಿಯಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಚಿತ್ರವಿದ್ದ ಪೋಸ್ಟರ್​ ಮತ್ತು ತ್ರಿವರ್ಣವನ್ನು ಪ್ರದರ್ಶಿಸಿದ್ದಾನೆ.

ಮೌಂಟ್ ಎಲ್ಬ್ರಸ್ ಕ್ಲೈಂಬಿಂಗ್ ಪರ್ವತಾರೋಹಿಗಳಿಗೆ ಅತ್ಯಂತ ಸವಾಲಿನ ವಾತಾವರಣ ಮತ್ತು ಅತಿಯಾದ ದೈಹಿಕ ಒತ್ತಡವನ್ನು ಒಡ್ಡುತ್ತದೆ. ಕರ್ನೂಲ್ ಜಿಲ್ಲೆಯವನಾದ ಭುವನ್ 3ನೇ ತರಗತಿಯ ವಿದ್ಯಾರ್ಥಿ. ಈತನ ತಂದೆ ಗಂಧಮ್​ ಚಂದ್ರುಡು ಐಎಎಸ್ ಅಧಿಕಾರಿಯಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details