ಕರ್ನಾಟಕ

karnataka

ETV Bharat / bharat

Cyclone Yaas.. ಒಡಿಶಾದಲ್ಲಿ ಚಂಡಮಾರುತದ ನಡುವೆಯೂ 750 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ!

ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಲ್ಲಿ Cyclone Yaas ಆರ್ಭಟಿಸಿದೆ. ಈ ನಡುವೆ ಅಲ್ಲಿನ ಆರೋಗ್ಯ ಇಲಾಖೆ 750 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಿದೆ. ಡಿಎಸ್‌ಡಬ್ಲ್ಯುಒ, ಸಿಡಿಪಿಒ, ಅಂಗನವಾಡಿ ಕಾರ್ಯಕರ್ತರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ 4,555 ಗರ್ಭಿಣಿಯರನ್ನು ಗುರುತಿಸಲಾಗಿದೆ. ಇವರಲ್ಲಿ ಈಗಾಗಲೇ 2,107 ಮಂದಿಯನ್ನು ಮೇ 24 ರಿಂದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

750 Babies Born While Cyclone Yaas Battered Odisha
750 Babies Born While Cyclone Yaas Battered Odisha

By

Published : May 27, 2021, 9:22 PM IST

ಭುವನೇಶ್ವರ:ಒಡಿಶಾದಲ್ಲಿ ಯಾಸ್ ಚಂಡಮಾರುತದ ಆರ್ಭಟ ಜೋರಾಗಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸೈಕ್ಲೋನ್ ಪೀಡಿತ 10 ಕರಾವಳಿ ಜಿಲ್ಲೆಗಳಲ್ಲಿದ್ದ 750 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ.

ಡಿಎಸ್‌ಡಬ್ಲ್ಯುಒ, ಸಿಡಿಪಿಒ, ಅಂಗನವಾಡಿ ಕಾರ್ಯಕರ್ತರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ 4,555 ಗರ್ಭಿಣಿಯರನ್ನು ಗುರುತಿಸಲಾಗಿದೆ. ಇವರಲ್ಲಿ ಈಗಾಗಲೇ 2,107 ಮಂದಿಯನ್ನು ಮೇ 24 ರಿಂದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ಯಾಸ್ ಅಬ್ಬರಕ್ಕೆ ಜಾರ್ಖಂಡ್​ನಲ್ಲಿ ಭೀಕರ ಪ್ರವಾಹ..ಕೊಚ್ಚಿ ಹೋದ ವಾಹನ..!

ಬಾಲ್​ಸೋರ್​​ನಲ್ಲಿ 58, ಭದ್ರಾಕ್​ನಲ್ಲಿ 98, ಕಟಕ್​ನಲ್ಲಿ 61, ಜಗತ್​ಸಿಂಗ್ ಪುರದಲ್ಲಿ 84, ಜಜ್‌ಪುರದಲ್ಲಿ 69, ಕಿಯೋಂಘರ್​ನಲ್ಲಿ 55, ಮಯೂರ್​ಭಂಜ್​ನಲ್ಲಿ 36, ಕೇಂದ್ರಪಾರದಲ್ಲಿ 166, ಖೋರ್ಧಾದಲ್ಲಿ 95 ಮತ್ತು ಪುರಿ ಜಿಲ್ಲೆಯ 28 ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭೀಕರ ಚಂಡಮಾರುತದ ನಡುವೆಯೂ ಮೇ 25 ಮತ್ತು 26 ರಂದು 750 ಜನರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದ್ದು, ತಾಯಂದಿರು ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.

ABOUT THE AUTHOR

...view details