ಕರ್ನಾಟಕ

karnataka

ETV Bharat / bharat

ಸ್ನಾನಕ್ಕೆ ನದಿಗಿಳಿದ 6 ಬಾಲಕಿಯರು, ಓರ್ವ ಯುವತಿ ನೀರುಪಾಲು - ತಮಿಳುನಾಡು ನದಿಯಲ್ಲಿ ದುರಂತ

ತಮಿಳುನಾಡಿನ ಕೆದಿಲಂ ನದಿಯ ಅಣೆಕಟ್ಟೆಯ ಸಮೀಪ ಸ್ನಾನಕ್ಕೆ ಹೋಗಿ 6 ಬಾಲಕಿಯರು, ಓರ್ವ ಯುವತಿ ನೀರುಪಾಲಾದ ದುರ್ಘಟನೆ ನಡೆದಿದೆ.

7-drown-in-kedilam-river-in-tamil-nadu
ನದಿಯಲ್ಲಿ ಈಜಾಡಲು ಹೋಗಿ 7 ಮಂದಿ ನೀರುಪಾಲು

By

Published : Jun 5, 2022, 2:55 PM IST

Updated : Jun 5, 2022, 5:41 PM IST

ಕಡಲೂರು (ತಮಿಳುನಾಡು):ನದಿಯಲ್ಲಿ ಸ್ನಾನ ಮಾಡಲು ಹೋಗಿ 6 ಬಾಲಕಿಯರು ಮತ್ತು ಓರ್ವ ಯುವತಿ ನೀರುಪಾಲಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರಿನ ಬಳಿಯ ಕೆದಿಲಂ ನದಿಯ ಅಣೆಕಟ್ಟೆಯ ಸಮೀಪ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ನವನೀತಾ (19), ಸುಮುತಾ (16), ಪ್ರಿಯಾ (17), ಮೋನಿಕಾ (15), ಸಂಗೀತಾ (17), ಪ್ರಿಯದರ್ಶಿನಿ (14) ಮತ್ತು ಕವಿಯಾ (12) ಎಂದು ಗುರುತಿಸಲಾಗಿದೆ.

ಸ್ನಾನಕ್ಕೆ ನದಿಗಿಳಿದ 6 ಹುಡುಗಿಯರು, ಒಬ್ಬ ಯುವತಿ ನೀರುಪಾಲು

ಕೆದಿಲಂ ನದಿಯ ಅಣೆಕಟ್ಟೆಯ ಸಮೀಪ ನದಿಯಲ್ಲಿ ಬಾಲಕಿಯರು ಮತ್ತು ಯುವತಿ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಆಳವನ್ನು ಅರಿಯದ ಇವರು ಒಬ್ಬರ ಹಿಂದೆ ಒಬ್ಬರಂತೆ ನೀರಿನಲ್ಲಿ ಇಳಿದಾಗ ಎಲ್ಲರೂ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದಿ:ಕಂಟೈನರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ: 16 ಮಂದಿ ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ

Last Updated : Jun 5, 2022, 5:41 PM IST

ABOUT THE AUTHOR

...view details