ಕರ್ನಾಟಕ

karnataka

ETV Bharat / bharat

ದೆಹಲಿ ಮೃಗಾಲಯದಲ್ಲಿ 7 ಮೃಗಗಳ ಸಾವು: ಕಾರಣ? - ಏಷ್ಯಾಟಿಕ್ ಸಿಂಹಗಳು ಮತ್ತು ಬಂಗಾಳ ಹುಲಿಗಳ ಸಂರಕ್ಷಣಾ ಸಂವರ್ಧನೆ

ಸೆರೆಯಲ್ಲಿರುವ ದೊಡ್ಡ ಬೆಕ್ಕುಗಳು ಮೂತ್ರಪಿಂಡದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತವಂತೆ. ಕಾರಣ ಹೆಚ್ಚಿನ ಚಲನ ವಲನದ ಸಮಸ್ಯೆ. ಹಾಗೆ ಇವುಗಳಲ್ಲಿ ಸ್ಥೂಲಕಾಯತೆ ಮತ್ತು ಸ್ಟೀರಿಯೊಟೈಪಿಕ್ ನಡವಳಿಕೆಯನ್ನು ಗಮನಿಸಲಾಗಿದೆ.

2.5 ವರ್ಷಗಳಲ್ಲಿ ದೆಹಲಿ ಮೃಗಾಲಯದಲ್ಲಿ 7 ಬಿಗ್​ ಕ್ಯಾಟ್​ಗಳ ಸಾವು
2.5 ವರ್ಷಗಳಲ್ಲಿ ದೆಹಲಿ ಮೃಗಾಲಯದಲ್ಲಿ 7 ಬಿಗ್​ ಕ್ಯಾಟ್​ಗಳ ಸಾವು

By

Published : Mar 6, 2022, 4:15 PM IST

ನವದೆಹಲಿ: ಏಷ್ಯಾಟಿಕ್ ಸಿಂಹಗಳು ಮತ್ತು ಬಂಗಾಳ ಹುಲಿಗಳ ಸಂರಕ್ಷಣಾ ಸಂವರ್ಧನೆಯ ಪ್ರಮುಖ ತಾಣವಾಗಿರುವ ದೆಹಲಿ ಮೃಗಾಲಯದಲ್ಲಿ ಸುಮಾರು ಎರಡೂವರೆ ವರ್ಷಗಳಲ್ಲಿ ಏಳು ಮೃಗಗಳು ಸಾವಿಗೀಡಾಗಿವೆ. ಇವುಗಳಳಲ್ಲಿ ಕನಿಷ್ಠ ನಾಲ್ಕು ಕಿಡ್ನಿ ಸಮಸ್ಯೆಯಿಂದಲೇ ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ದೆಹಲಿ ಮೃಗಾಲಯ

ಸೆರೆಯಲ್ಲಿರುವ ದೊಡ್ಡ ಬೆಕ್ಕುಗಳು ಮೂತ್ರಪಿಂಡದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತವೆಯಂತೆ. ಕಾರಣ ಹೆಚ್ಚಿನ ಚಲನ ವಲನದ ಸಮಸ್ಯೆ. ಹಾಗೆ ಇವುಗಳಲ್ಲಿ ಸ್ಥೂಲಕಾಯತೆ ಮತ್ತು ಸ್ಟೀರಿಯೊಟೈಪಿಕ್ ನಡವಳಿಕೆಯನ್ನು ಗಮನಿಸಲಾಗಿದೆ.

ಈ ಸಮಸ್ಯೆ ಪರಿಹರಿಸಲು ವೈವಿಧ್ಯಮಯ ಆಹಾರವನ್ನು ನೀಡಲು ಸಿಬ್ಬಂದಿ ಮುಂದಾಗಿದ್ದಾರೆ. ದಿನನಿತ್ಯದ ತನಿಖೆ (ರಕ್ತ ನಿಯತಾಂಕಗಳು) ನಡೆಸಿ ಆ ಮೂಲಕ ಅವುಗಳ ಆರೋಗ್ಯದ ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಾಗಿದೆ.

ದೆಹಲಿ ಮೃಗಾಲಯ

ಫೆಬ್ರವರಿ 21 ರಂದು ಅಧಿಕಾರ ವಹಿಸಿಕೊಂಡ ದೆಹಲಿ ಮೃಗಾಲಯದ ನಿರ್ದೇಶಕ ಧರ್ಮದೇವ್ ರೈ ಅವರು ಈ ವಿಷಯವನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ನಾವು ಅವುಗಳ ವಂಶಾವಳಿ ಮತ್ತು ಸಂತತಿಯ ಬಗ್ಗೆ ಹೆಚ್ಚಿನದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ನಾವು ಏನೇ ನಿರ್ಧಾರಕ್ಕೂ ಬರುವ ಮುನ್ನ ಸಾವಿನ ಕಾರಣಗಳನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ.

ವಿವರ:ಇತ್ತೀಚೆಗೆ ಅಂದರೆ ಜನವರಿ 10 ರಂದು ಎಂಟು ವರ್ಷದ ಸಿಂಹಿಣಿ ಹೇಮಾ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ ನಂತರ ಈ ಎಲ್ಲಾ ಬೆಳವಣಿಗೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೇಮಾ ಮತ್ತು ಅಮನ್ ಎಂಬ ಸಿಂಹವನ್ನು ಚಂಡೀಗಢದ ಛತ್ಬೀರ್ ಮೃಗಾಲಯದಿಂದ 2015 ರಲ್ಲಿ ತರಲಾಗಿತ್ತು. ಅಮನ್ ಕಳೆದ ವರ್ಷ ಮೇ 9 ರಂದು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದ. ಸಿಂಹವು ಸೋಂಕುಗಳು, ದೀರ್ಘಕಾಲದ ಬ್ರಾಂಕೈಟಿಸ್, ಶಾರೀರಿಕ ಅಸಹಜತೆಗಳು ಮತ್ತು ಅನೇಕ ಅಂಗಗಳಲ್ಲಿ ಸಂಕೀರ್ಣತೆಗಳ ಲಕ್ಷಣವನ್ನು ಎದುರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಮೃಗಾಲಯ

ಇನ್ನು ಆರು ವರ್ಷದ ನಿರ್ಭಯಾ ಎಂಬ ಬಿಳಿ ಹುಲಿ ಡಿಸೆಂಬರ್ 14, 2020 ರಂದು ಎರಡು ಮರಿಗಳಿಗೆ ಜನ್ಮ ನೀಡಿದ ನಾಲ್ಕು ದಿನಗಳ ನಂತರ ತೀವ್ರ ಹೃದಯ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯದ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಈ ಮರಿಗಳಲ್ಲಿ ಹೆರಿಗೆ ಆಗುವಾಗ ಒಂದು ಸಾವಿಗೀಡಾದರೆ, ಇನ್ನೊಂದು 19 ದಿನಗಳ ನಂತರ ಸಾವನ್ನಪ್ಪಿದೆ. 15 ವರ್ಷದ ಬಂಗಾಳದ ಹುಲಿ, 'B-2' ಅಥವಾ ಬಿಟ್ಟು ನವೆಂಬರ್ 19, 2020 ರಂದು ದೀರ್ಘಕಾಲದ ಮೂತ್ರಪಿಂಡದ ಅಸ್ವಸ್ಥತೆ ಮತ್ತು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದೆ. 2014 ರಲ್ಲಿ ಭೋಪಾಲ್‌ನ ವ್ಯಾನ್ ವಿಹಾರ್ ಮೃಗಾಲಯದಿಂದ ಇದನ್ನು ತರಲಾಗಿತ್ತು. 'ಬಿ-2' ತನ್ನ ಸರಾಸರಿ ಜೀವಿತಾವಧಿಯನ್ನು ಪೂರ್ಣಗೊಳಿಸಿತ್ತು.

ದೆಹಲಿ ಮೃಗಾಲಯ

ಬಂಗಾಳದ ಹುಲಿ ಕಾಡಿನಲ್ಲಿ ಸರಾಸರಿ ಎಂಟರಿಂದ 10 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಪ್ರಾಣಿಗಳ ಗರಿಷ್ಠ ಜೀವಿತಾವಧಿ ಸುಮಾರು 15 ವರ್ಷಗಳು.

ಅಕ್ಟೋಬರ್ 7, 2020 ರಂದು ಒಂಬತ್ತು ವರ್ಷಗಳಿಂದ ಪಾರ್ಶ್ವವಾಯುದಿಂದ ಬಳಲುತ್ತಿದ್ದ 11 ವರ್ಷದ ಸಿಂಹಿಣಿ ಅಖಿಲಾ ಅಹ ತೀವ್ರ ಮೂತ್ರಪಿಂಡ ವೈಫಲ್ಯದಿಂದ ನಿಧನವಾಗಿದೆ.

ಅಖಿಲಾ ಮೇ 19, 2009 ರಂದು ಮೃಗಾಲಯದಲ್ಲಿ ಜನಿಸಿತ್ತು. ಅದು ಚಿಕ್ಕ ವಯಸ್ಸಿನಲ್ಲಿಯೇ ನರಗಳ ಅಸ್ವಸ್ಥತೆ ಮತ್ತು ಹಿಂಭಾಗದ ಪಾರ್ಶ್ವವಾಯುಗೆ ತುತ್ತಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಪನಾ ಎಂಬ ಹೆಸರಿನ 13 ವರ್ಷದ ಬಿಳಿ ಹುಲಿ ಏಪ್ರಿಲ್ 23, 2020 ರಂದು ಮೃಗಾಲಯದಲ್ಲಿ ಸಾವಿಗೀಡಾಗಿದೆ. ಇದು ಸಹ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದೆ.

ಸೆಪ್ಟೆಂಬರ್ 20, 2019 ರಂದು ಎಂಟು ವರ್ಷದ ರಾಮ ಎಂಬ ಹುಲಿ ಸಾವಿಗೆ ಮೂತ್ರಪಿಂಡ ವೈಫಲ್ಯವೂ ಕಾರಣವಾಗಿತ್ತು. 2014 ರಲ್ಲಿ ಮೈಸೂರು ಮೃಗಾಲಯದಿಂದ ಇದನ್ನು ತರಲಾಗಿತ್ತು.

ಪ್ರಸ್ತುತ ದೆಹಲಿ ಮೃಗಾಲಯವು ಐದು ಬಿಳಿ ಹುಲಿ,( ಮೂರು ಗಂಡು ಮತ್ತು ಎರಡು ಹೆಣ್ಣು) ಮತ್ತು ನಾಲ್ಕು ಬಂಗಾಳ ಹುಲಿಗಳು(ಮೂರು ಹೆಣ್ಣು ಮತ್ತು ಒಂದು ಗಂಡು) ಹೊಂದಿದೆ. ನಾಲ್ಕು ಸಿಂಹಗಳಿದ್ದು, ಇದರಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಇವೆ.

For All Latest Updates

ABOUT THE AUTHOR

...view details