ನವದೆಹಲಿ: 2019ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಕಳೆದ ಮಾರ್ಚ್ ತಿಂಗಳಲ್ಲೇ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಅವರಿಗೆ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. 'ಮಣಿಕರ್ಣಿಕಾ' ಹಾಗೂ 'ಪಂಗಾ' ಸಿನಿಮಾದಲ್ಲಿನ ಅಮೋಘ ನಟನೆಗಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಲೈವಾಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ತಮಿಳಿನ 'ಅಸುರನ್' ಚಿತ್ರದ ನಟನೆಯಿಂದಾಗಿ ನಟ ಧನುಷ್ ಅವರು ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ. 'ಭೋಂಸ್ಲೆ' ಚಿತ್ರದಲ್ಲಿನ ನಟನೆ ಮನೋಜ್ ಬಾಜಪೇಯಿ ಅವರಿಗರ ಕೂಡ ಅತ್ಯುತ್ತಮ ನಟ ಎಂದು ಅವಾರ್ಡ್ ನೀಡಲಾಗಿದೆ.
ಕನ್ನಡಕ್ಕೆ 2 ಪ್ರಶಸ್ತಿ
ಕನ್ನಡದ 'ಅಕ್ಷಿ' ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಿದೆ. ಮಿಕ್ಕಂತೆ ಸ್ಪರ್ಧಾತ್ಮಕ ವಿಭಾಗದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಸಾಹಸ ನಿರ್ದೇಶನಕ್ಕೆ ವಿಕ್ರಮ್ ಮೋರ್ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಗಳ ವಿವರ ಹೀಗಿದೆ:
- ಅತ್ಯುತ್ತಮ ಚಿತ್ರ : 'ಮರಕ್ಕರ್; ಅರಬಿಕಾಡಾಲಿಂಟೆ-ಸಿಂಹಂ' (ಮಲಯಾಳಂ)
- ಅತ್ಯುತ್ತಮ ನಿರ್ದೇಶಕ: ಸಂಜಯ್ ಪುರಾನ್ ಸಿಂಗ್ ಚೌಹನ್ ('ಬಹಟ್ಟರ್ ಹುರೈನ್' )
- ಅತ್ಯುತ್ತಮ ನಟ: ಧನುಷ್ (ಅಸುರನ್), ಮನೋಜ್ ಬಾಜಪೇಯಿ (ಭೋಂಸ್ಲೆ)
- ಅತ್ಯುತ್ತಮ ನಟಿ: ಕಂಗನಾ ರಣಾವತ್ (ಪಂಗಾ ಮತ್ತು ಮಣಿಕರ್ಣಿಕಾ)
- ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)
- ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಷಿ (ಹಿಂದಿ - ದಿ ತಷ್ಕೆಂಟ್ ಫೈಲ್ಸ್)
- ಅತ್ಯುತ್ತಮ ಮಕ್ಕಳ ಸಿನಿಮಾ: ಕಸ್ತೂರಿ (ಹಿಂದಿ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಬಿ ಪ್ರಾಕ್
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಾವನಿ ರವೀಂದ್ರ
- ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
- ಅತ್ಯುತ್ತಮ ತುಳು ಚಿತ್ರ: ಪಿಂಗಾರ
- ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
- ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
- ಅತ್ಯುತ್ತಮ ತಮಿಳು ಚಿತ್ರ: ಅಸುರನ್
- ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
- ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
- ಅತ್ಯುತ್ತಮ ಸಾಹಸ ನಿರ್ದೇಶಕ: ವಿಕ್ರಮ್ ಮೋರ್ (ಅವನ್ನೇ ಶ್ರೀಮನ್ನಾರಾಯಣ)
- ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ.ಇಮ್ಮಾಮ್ (ವಿಶ್ವಾಸಂ)