ಕರ್ನಾಟಕ

karnataka

ETV Bharat / bharat

ವಿಮಾನದ ಶೌಚಾಲಯದಲ್ಲಿ 4.21 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ! - ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ

ವಿಮಾನದ ಶೌಚಾಲಯದಲ್ಲಿ 4.21 ಕೋಟಿ ರೂ. ಮೌಲ್ಯದ 60 ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿಕೊಂಡಿದ್ದಾರೆ.

ಚಿನ್ನದ ಗಟ್ಟಿ ಜಪ್ತಿ
ಚಿನ್ನದ ಗಟ್ಟಿ ಜಪ್ತಿ

By

Published : Jun 5, 2022, 10:20 AM IST

ಚೆನ್ನೈ: ದುಬೈನಿಂದ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಮಾನವೊಂದರ ಶೌಚಾಲಯದಿಂದ 4.21 ಕೋಟಿ ರೂಪಾಯಿ ಮೌಲ್ಯದ 60 ಚಿನ್ನದ ಗಟ್ಟಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

4.21 ಕೋಟಿ ಮೌಲ್ಯದ 9.02 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಆಕ್ಟ್ 1962 ರ ಅಡಿ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸದಂತೆ ಕಸ್ಟಮ್ಸ್ ಅಧಿಕಾರಿಗಳು 25.87 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನ ವಶಪಡಿಸಿಕೊಂಡು, ದುಬೈನಿಂದ ಆಗಮಿಸಿದ 61 ವರ್ಷದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಈತ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯವನಾಗಿದ್ದು, ತನ್ನ ಲಗೇಜ್‌ನ ಟೂಲ್ ಕಿಟ್​ನಲ್ಲಿ 11 ಚಿನ್ನದ ಬಿಸ್ಕತ್​ ಬಚ್ಚಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ದುಬೈನಿಂದ ಮಂಗಳೂರಿಗೆ ಚಿನ್ನ ಕಳ್ಳ ಸಾಗಣೆ: 32 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ABOUT THE AUTHOR

...view details