ಗುಂಟೂರು(ಆಂಧ್ರಪ್ರದೇಶ):ಬಿಹಾರ ಹಾಗೂ ಒಡಿಶಾ ಮೂಲದ ಆರು ಕೂಲಿ ಕಾರ್ಮಿಕರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಇವರು ಸಾವನ್ನಪ್ಪಿರುವ ಅನುಮಾನವಿದೆ.
ಗುಂಟೂರು ಜಿಲ್ಲೆಯ ರೇಪಲ್ಲೆ ಗ್ರಾಮದಲ್ಲಿನ ಮನೆವೊಂದರಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತರನ್ನು ರಾಮಮೂರ್ತಿ, ಕಿರಣ್, ಮನೋಜ್, ಮಹೇಂದ್ರ, ನವೀನ್ ಹಾಗೂ ಪಂಡೋಬಾ ಎಂದು ಗುರುತಿಸಲಾಗಿದೆ.