ಕರ್ನಾಟಕ

karnataka

ತಮಿಳುನಾಡು ಚುನಾವಣೆ: ಸಿಪಿಐಎಂ, ಡಿಎಂಕೆ ಸ್ಥಾನ ಹಂಚಿಕೆ ಮಾತುಕತೆ ಅಪೂರ್ಣ

By

Published : Mar 6, 2021, 3:58 PM IST

ಡಿಎಂಕೆಗೆ 6 ಸ್ಥಾನಗಳನ್ನು ನೀಡಲಾಗಿದ್ದು, ಡಿಎಂಕೆಯು ಸಿಪಿಐ (ಎಂ)ನಿಂದ ಒಂದು ಹೆಚ್ಚುವರಿ ಸ್ಥಾನದ ಬೇಡಿಕೆ ಇಟ್ಟಿದೆ. ಆದ್ದರಿಂದ ಮಾತುಕತೆ ನಿರ್ಣಾಯಕ ಹಂತಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಚೆನ್ನೈ (ತಮಿಳುನಾಡು): ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಸ್ಥಾನ ಹಂಚಿಕೆ ಕುರಿತು ಸಿಪಿಐ (ಎಂ) ಮತ್ತು ಡಿಎಂಕೆ ನಡುವಿನ ಎರಡನೇ ಸುತ್ತಿನ ಮಾತುಕತೆಯೂ ನಿರ್ಣಾಯಕ ಹಂತಕ್ಕೆ ಬಂದಿಲ್ಲ.

ಸಿಪಿಐ (ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣನ್, ಪಕ್ಷದ ಸದಸ್ಯರಾದ ಜಿ. ರಾಮಕೃಷ್ಣನ್ ಮತ್ತು ಮಹೇಂದ್ರನ್ ಅವರು ಡಿಎಂಕೆ ಮುಖಂಡರನ್ನು ಅರಿವಲಯಂನ ಡಿಎಂಕೆ ಕೇಂದ್ರ ಕಚೇರಿಯಲ್ಲಿ ಇಂದು ಭೇಟಿಯಾದರು.

"ಸಿಪಿಐ (ಎಂ) ಮತ್ತು ಡಿಎಂಕೆ ನಿಯೋಗಗಳು ಇಂದಿನ ಸಭೆಯಲ್ಲಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಿವೆ. ಎರಡೂ ಪಕ್ಷಗಳು ತಮ್ಮ ಅಗತ್ಯ ಸಂಖ್ಯೆಯ ಸ್ಥಾನಗಳನ್ನು ಕೇಳಿಕೊಂಡಿವೆ." ಎಂದು ಬಾಲಕೃಷ್ಣನ್ ಡಿಎಂಕೆ ಮುಖಂಡರೊಂದಿಗಿನ ಸಭೆಯ ನಂತರ ಹೇಳಿದರು.

"ಡಿಎಂಕೆ ನಮಗೆ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳನ್ನು ನೀಡಿದೆ. ಆದರೆ ಅದಕ್ಕಿಂತ ಹೆಚ್ಚಿನದನ್ನು ನಾವು ಕೋರಿದ್ದೇವೆ. ಈ ಕುರಿತು ಪಕ್ಷದ ಸದಸ್ಯರೊಂದಿಗೆ ಚರ್ಚಿಸಿ ನಮ್ಮ ನಿರ್ಧಾರ ತಿಳಿಸಲಿದ್ದೇವೆ." ಎಂದು ಬಾಲಕೃಷ್ಣನ್ ಹೇಳಿದರು.

ಡಿಎಂಕೆಗೆ 6 ಸ್ಥಾನಗಳನ್ನು ನೀಡಲಾಗಿದ್ದು, ಡಿಎಂಕೆಯು ಸಿಪಿಐ (ಎಂ)ನಿಂದ ಒಂದು ಹೆಚ್ಚುವರಿ ಸ್ಥಾನದ ಬೇಡಿಕೆ ಇಟ್ಟಿದೆ. ಆದ್ದರಿಂದ ಮಾತುಕತೆ ನಿರ್ಣಾಯಕ ಹಂತಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಸಿಪಿಐ (ಎಂ) ಮತ್ತು ಡಿಎಂಕೆ ನಡುವೆ ಸೀಟು ಹಂಚಿಕೆ ಕುರಿತು ಮೂರನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ.

ABOUT THE AUTHOR

...view details