ಕರ್ನಾಟಕ

karnataka

ETV Bharat / bharat

15 ಸಾವಿರ ಶಾಲೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ : ನಿರ್ಮಲಾ ಸೀತಾರಾಮನ್ - ಸೈನಿಕ ಶಾಲೆ

ದೇಶದ ಕೆಲ ಎನ್​ಜಿಒ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 100 ಸೈನಿಕ ಶಾಲೆಗಳ ಸ್ಥಾಪಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ನಮ್ಮ ಅನೇಕ ನಗರಗಳಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ..

central Budget
ಕೇಂದ್ರ ಬಜೆಟ್​

By

Published : Feb 1, 2021, 8:14 PM IST

ನವದೆಹಲಿ : ದೇಶದ 15 ಸಾವಿರ ಶಾಲೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲಾ ಅಂಶಗಳು ಅನ್ವಯವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲಾ ಅಂಶಗಳ ಬೆಂಬಲದಿಂದ 15,000ಕ್ಕೂ ಹೆಚ್ಚು ಶಾಲೆಗಳು ಗುಣಾತ್ಮಕವಾಗಿ ಬಲಗೊಳ್ಳುತ್ತವೆ. ತಮ್ಮ ಪ್ರದೇಶಗಳಲ್ಲಿ ಆದರ್ಶ ಶಾಲೆಗಳಾಗಿ ಹೊರ ಹೊಮ್ಮಲು ಅನುವು ಮಾಡಿಕೊಡುವುದು, ಆದರ್ಶ ನೀತಿಯನ್ನು ಸಾಧಿಸಲು ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡುವುದು ಎಂದು ಕೇಂದ್ರ ಬಜೆಟ್ ಮಂಡಿಸುವಾಗ ಸೀತಾರಾಮನ್ ಹೇಳಿದರು.

ದೇಶದ ಕೆಲ ಎನ್​ಜಿಒ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 100 ಸೈನಿಕ ಶಾಲೆಗಳ ಸ್ಥಾಪಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ನಮ್ಮ ಅನೇಕ ನಗರಗಳಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ.

ಉದಾಹರಣೆಗೆ ಹೈದರಾಬಾದ್​​​ನಲ್ಲಿ ಸುಮಾರು 40 ಪ್ರಮುಖ ಸಂಸ್ಥೆಗಳು ನೆಲೆಗೊಂಡಿವೆ. ಅಂತಹ 9 ನಗರಗಳಲ್ಲಿ ನಾವು ಔಪಚಾರಿಕ ಸಮಿತಿ ರಚಿಸಲಾಗುತ್ತದೆ. ಇದರಿಂದ ಸಂಸ್ತೆಗಳು ಇನ್ನಷ್ಟು ಸ್ವಾಯತ್ತತೆ ಉಳಿಸಿಕೊಳ್ಳಲಿವೆ ಎಂದಿದ್ದಾರೆ. ಇದಲ್ಲದೆ ಲಡಾಖ್​​​ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ತೆರೆಯುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಶಿಕ್ಷಣ ಸುಧಾರಣೆಗೆ ಒತ್ತು ನೀಡಿದ ಕೇಂದ್ರ ಬಜೆಟ್ : ಸಚಿವ ಸುರೇಶ್ ಕುಮಾರ್

ABOUT THE AUTHOR

...view details