ನವದೆಹಲಿ : ಕಳೆದ ಎರಡು ವರ್ಷಗಳಲ್ಲಿ 15.5 ಲಕ್ಷಕ್ಕೂ ಹೆಚ್ಚು ಸೈಬರ್ ಸುರಕ್ಷತೆಗೆ ಸಂಬಂಧಪಟ್ಟ ಘಟನೆಗಳು ವರದಿಯಾಗಿವೆ. ಈ ಪೈಕಿ 11.58 ಲಕ್ಷ ಘಟನೆಗಳು 2020ರಲ್ಲೇ ದಾಖಲಾಗಿವೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 70 ಬಿ ಯ ನಿಬಂಧನೆಗಳನ್ನು ಅನುಸರಿಸಿ ಸೈಬರ್ ಸುರಕ್ಷತೆ ಘಟನೆಗಳಿಗೆ ಸ್ಪಂದಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ರಾಷ್ಟ್ರೀಯ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಓದಿ : ಜಾಹೀರಾತಿಗಾಗಿ ತಮ್ಮ ಹೆಸರು ಬಳಸಿಕೊಂಡ ಆ್ಯಪ್: ಈ ಬಗ್ಗೆ ಶಶಿ ತರೂರ್ ಹೇಳಿದ್ದೇನು?
ಸಿಇಆರ್‌ಟಿ-ಇನ್ ತನ್ನ ಸಾಂದರ್ಭಿಕ ಜಾಗೃತಿ ವ್ಯವಸ್ಥೆಗಳಿಂದ ಇನ್ಪುಟ್ಗಳನ್ನು ಪಡೆಯುತ್ತದೆ ಮತ್ತು ನೆಟ್‌ವರ್ಕ್‌ಗಳಲ್ಲಿ ಮಾಲ್‌ವೇರ್ ದಾಳಿಯ ಬಗ್ಗೆ ಗುಪ್ತಚರ ಮೂಲಗಳಿಗೆ ಬೆದರಿಕೆ ಮಾಹಿತಿ ಪಡೆಯುತ್ತಿವೆ ಎಂದು ರೆಡ್ಡಿ ತಿಳಿಸಿದ್ದಾರೆ.
ಯಾವುದೇ ಘಟನೆ ಸಿಇಆರ್‌ಟಿ-ಇನ್ ಗಮನಕ್ಕೆ ಬಂದಾಗ, ಪರಿಹಾರದ ಕ್ರಮಗಳಿಗಾಗಿ ಸಂಬಂಧಪಟ್ಟ ಘಟಕಗಳಿಗೆ ಮತ್ತು ವಲಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಗಳಿಗೆ (ಸಿಇಆರ್‌ಟಿ) ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ ಎಂದು ಮಾಹಿತಿ ನೀಡಿದರು.