ಗುವಾಹಟಿ(ಅಸ್ಸೋಂ) :ಅಫ್ಘಾನಿಸ್ತಾನ್ನಲ್ಲಿ ತಾಲಿಬಾನ್ ಉಗ್ರರ ಹಿಂಸೆ ಮುಂದುವರಿದಿದೆ. ಭಾರತದಲ್ಲಿ ತಾಲಿಬಾನಿಗಳಿಗೆ ಬೆಂಬಲಿಸಿದ ವರದಿಗಳಾಗುತ್ತಿವೆ. ಈ ನಡುವೆ ತಾಲಿಬಾನಿಗಳನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಅಸ್ಸೋಂನಲ್ಲಿ 14 ಜನರನ್ನು ಬಂಧಿಸಲಾಗಿದೆ.
ಶುಕ್ರವಾರ ರಾತ್ರಿಯಿಂದ ಈವರೆಗೆ 14 ಮಂದಿಯ ಬಂಧನವಾಗಿದೆ. ಬಂಧಿತರ ವಿರುದ್ಧ ಐಟಿ ಕಾಯ್ದೆ ಸೇರಿ ಸಿಆರ್ಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಮಾಜದ ಸ್ವಾಸ್ತ್ಯ ಹಾಳುಗೆಡುವ ಪೋಸ್ಟ್ಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಎಂದಿರುವ ಪೊಲೀಸರು, ಇಂತಹ ಕೃತ್ಯ ಗಮನಕ್ಕೆ ಬಂದರೆ ತಕ್ಷಣ ಬಂಧಿಸಲಾಗುವುದು ಎಂದಿದ್ದಾರೆ.