ಕರ್ನಾಟಕ

karnataka

ETV Bharat / bharat

ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಕೊಂದು, ಹಣ ದೋಚಿದ ದುಷ್ಕರ್ಮಿಗಳು - ಹೈದರಾಬಾದ್​​ನಲ್ಲಿ ಹಣ ದೋಚಿದ ದುಷ್ಕರ್ಮಿಗಳು

ಎಟಿಎಂಗೆ ಹಣ ತುಂಬಲು ಬಂದ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ, ಓರ್ವನನ್ನು ಕೊಂದು, ಹಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

1 dead as gunmen open fire at bank ATM in Telangana
ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಕೊಂದು, ಹಣ ದೋಚಿದ ದುಷ್ಕರ್ಮಿಗಳು

By

Published : Apr 29, 2021, 7:40 PM IST

ಹೈದರಾಬಾದ್‌: ಅಪರಿಚಿತ ಬಂದೂಕುಧಾರಿಗಳು ಗುಂಡುಹಾರಿಸಿದ ಕಾರಣದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ಹೈದರಾಬಾದ್​ನ ಕುಕಟ್​ಪಲ್ಲಿಯಲ್ಲಿರುವ ಪಟೇಲ್​ ಕುಂಟ ಪಾರ್ಕ್​ ಬಳಿಯಿರುವ ಹೆಚ್​ಡಿಎಫ್​ಸಿ ಎಟಿಎಂ ಕೇಂದ್ರದ ಬಳಿ ನಡೆದಿದೆ.

ಬ್ಯಾಂಕ್ ಸಿಬ್ಬಂದಿ ಅಲಿ ಬೇಗ್​​ ಮತ್ತು ಶ್ರೀನಿವಾಸ್ ಯಂತ್ರಗಳಲ್ಲಿ ಹಣವನ್ನು ಲೋಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡಿದ್ದ ಅಲಿ ಬೇಗ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಶ್ರೀನಿವಾಸ ಪರಿಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಬಂದೂಕುಧಾರಿಗಳು ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರಾಬಾದ್ ಪೊಲೀಸರು ಎರಡು ಗುಂಡುಗಳು ಮತ್ತು ಬುಲೆಟ್ ಲಾಕ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details