18 ಮಕ್ಕಳ ಸಮೇತ ನದಿಗೆ ಬಿದ್ದ ಶಾಲಾ ವಾಹನ - SCHOOL VAN FELL INTO A RIVER
🎬 Watch Now: Feature Video
Published : Oct 23, 2024, 10:41 AM IST
|Updated : Oct 23, 2024, 1:40 PM IST
ಶಕ್ತಿ(ಛತ್ತೀಸ್ಗಢ): 18 ಮಕ್ಕಳನ್ನು ತುಂಬಿದ್ದ ಶಾಲಾ ವ್ಯಾನ್ ಸೋನಾ ನದಿಗೆ ಪಲ್ಟಿಯಾಗಿರುವ ಘಟನೆ ಛತ್ತೀಸ್ಗಢದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ 18 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂದಿನಂತೆ ಇಂದು ಕೂಡ ಮಕ್ಕಳನ್ನು ತುಂಬಿಕೊಂಡು ಶಾಲಾ ವ್ಯಾನ್ ಹೋಗುತ್ತಿತ್ತು. ಸೋನಾ ನದಿಗೆ ನಿರ್ಮಿಸಿರುವ ಸೇತುವೆ ಬಳಿ ತಲುಪಿದಾಗ ವ್ಯಾನ್ ನದಿಗೆ ಬಿದ್ದಿದೆ. ವ್ಯಾನ್‌ನಲ್ಲಿದ್ದ ಮಕ್ಕಳು ಹಸೌದ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಹಸೌದ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಸೌದ್‌ನಲ್ಲಿ ಘಟನೆ ನಡೆದಿದೆ.
ವ್ಯಾನ್ ನದಿಗೆ ಬಿದ್ದ ತಕ್ಷಣವೇ ಅಲ್ಲೇ ಇದ್ದ ಗ್ರಾಮಸ್ಥರು ಮಕ್ಕಳ ರಕ್ಷಣೆಗೆ ಧಾವಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ವ್ಯಾನ್‌ನಲ್ಲಿದ್ದ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಎಲ್ಲ ಮಕ್ಕಳು ಒಂದೇ ಖಾಸಗಿ ಶಾಲೆಯವರು ಎನ್ನಲಾಗಿದೆ. ಸದ್ಯ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ; 5 ಸಾವು, ಮೂವರಿಗೆ ಗಾಯ - ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಇದನ್ನೂ ಓದಿ: ಶಸ್ತ್ರಾಸ್ತ್ರ ತಯಾರಿಕಾ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ ; 13 ಮಂದಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ