ದೆಹಲಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ ಎಂಟು ಬೋಗಿಗಳು - ಹಳಿ ತಪ್ಪಿದ ಗೂಡ್ಸ್ ರೈಲು
🎬 Watch Now: Feature Video
Published : Feb 17, 2024, 2:49 PM IST
ನವದೆಹಲಿ: ಶನಿವಾರ ದೆಹಲಿಯಲ್ಲಿ ಗೂಡ್ಸ್ ರೈಲು ಅಪಘಾತಕ್ಕೀಡಾಗಿದೆ. ನಗರ-ದಯಾಬಸ್ತಿ ವಿಭಾಗದಲ್ಲಿ ಗೂಡ್ಸ್ ರೈಲಿನ ಎಂಟು ಬೋಗಿಗಳು ಹಳಿತಪ್ಪಿವೆ. ಜಖೀರಾ ಮೇಲ್ಸೇತುವೆ ಬಳಿ ಈ ದುರ್ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೆ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗೂಡ್ಸ್ ರೈಲಿನಲ್ಲಿ ಕಬ್ಬಿಣದ ಹಾಳೆಗಳ ರೋಲ್‌ಗಳನ್ನು ತುಂಬಿಸಲಾಗಿತ್ತು. ಇನ್ನು ಅಪಘಾತದಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬೆಳಗ್ಗೆ 11.52ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲವು ರೈಲುಗಳ ಸಮಯವನ್ನೂ ಬದಲಾಯಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖಾ ಮಾಡಲಾಗಿದೆ.
ಕಳೆದ ವರ್ಷ 6 ಅಕ್ಟೋಬರ್ 2023 ರಂದು ದೆಹಲಿಯಲ್ಲಿ ಗೂಡ್ಸ್ ರೈಲು ಅಪಘಾತಕ್ಕೀಡಾಗಿತ್ತು. ಸೆಪ್ಟೆಂಬರ್ 2023 ರಲ್ಲಿ, ರೈಲು ನಿಲ್ದಾಣದಿಂದ ಗಜ್ರೌಲಾಗೆ ಹೋಗುತ್ತಿದ್ದ ಗೂಡ್ಸ್ ರೈಲು ಮುಖ್ಯ ಮಾರ್ಗವನ್ನು ತಲುಪಿದ ತಕ್ಷಣ ಹಳಿತಪ್ಪಿತು. ಇದರಿಂದಾಗಿ 15ಕ್ಕೂ ಹೆಚ್ಚು ರೈಲುಗಳು ತಡವಾಗಿ ಸಂಚರಿಸಿದ್ದವು. ಅಷ್ಟೇ ಅಲ್ಲ, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸುಮಾರು ಮೂರು ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಮತ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಓದಿ: ಶಿವಮೊಗ್ಗ: ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ - ಮೂರು ಸಂಪೂರ್ಣ, 7 ಕಾರುಗಳಿಗೆ ಭಾಗಶಃ ಹಾನಿ