ಹೊಂಚುಹಾಕಿ ಪಾರಿವಾಳ ಬೇಟೆಯಾಡಿದ ಮೊಸಳೆ: ವಿಡಿಯೋ ನೋಡಿ - Crocodile Hunted Pigeon - CROCODILE HUNTED PIGEON

🎬 Watch Now: Feature Video

thumbnail

By ETV Bharat Karnataka Team

Published : May 22, 2024, 1:11 PM IST

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಯಡಕೂರಿಯ ಗ್ರಾಮದ ಸಮೀಪವಿರುವ ಕಾವೇರಿ ನದಿ ತಟದಲ್ಲಿ ಪರಿವಾಳವನ್ನು ಮೊಸಳೆಯೊಂದು ಹಿಡಿದು ನೀರೊಳಗೆ ಎಳೆದೊಯ್ದಿದೆ. ಗ್ರಾಮ ಸಂಪರ್ಕಿಸಲು ನಿರ್ಮಿಸಿರುವ ಸೇತುವೆ ಸಮೀಪದ ನದಿ ತಟದಲ್ಲಿ ಮೊಸಳೆಯು ಹೊಂಚುಹಾಕಿ ಪಾರಿವಾಳವನ್ನು ಹಿಡಿದಿದೆ. ಗ್ರಾಮದ ಯುವಕ ಅರುಣ್ ಎಂಬಾತ ಈ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಅರುಣ್ ನದಿ ತಟದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯ ಸಮೀಪದ ಜಗಲಿಕಟ್ಟೆಯಲ್ಲಿ ಕುಳಿತಿದ್ದರು. ಈ ವೇಳೆ ಮೊಸಳೆಯೊಂದು ನದಿಯ ದಡದಲ್ಲಿದ್ದ ಕೊಕ್ಕರೆಯನ್ನು ಹಿಡಿಯಲು ಶರವೇಗದಲ್ಲಿ ಬಂದಿದ್ದನ್ನು ಗಮನಿಸಿದ್ದಾರೆ. ಕೊಕ್ಕರೆ ಮೊಸಳೆ ದಾಳಿಗೆ ಸಿಗದೆ ಹಾರಿ ಹೋಗಿದೆ. ಇದನ್ನು ಕಂಡ ಅರುಣ್ ಮತ್ತೆ ಮೊಸಳೆ ಆಹಾರಕ್ಕೆ ಹೊರ ಬರುವುದೆಂದು ಕಾದು ಕುಳಿತಿದ್ದಾಗ ನೀರು ಕುಡಿಯಲು ಬಂದಿದ್ದ 1 ಪಾರಿವಾಳವನ್ನು ಮೊಸಳೆ ಎಳೆದೊಯ್ದಿದೆ. 

ಗ್ರಾಮಸ್ಥರಲ್ಲಿ ಆತಂಕ: ಘಟನೆ ನಡೆದ ಸ್ಥಳದಲ್ಲಿ ಗ್ರಾಮದ ಜನರು ತಮ್ಮ ದನ, ಕರುಗಳನ್ನು ಸ್ನಾನ ಮಾಡಿಸಲು ಕರೆದೊಯ್ಯುತ್ತಾರೆ. ಆದರೀಗ ಮೊಸಳೆ ಪ್ರತ್ಯಕ್ಷವಾಗಿ ಪಾರಿವಾಳವನ್ನು ಎಳೆದೊಯ್ದಿರುವುದನ್ನು ಕಣ್ಣಾರೆ ಕಂಡ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ನಮ್ಮ ಗ್ರಾಮದ ಸುತ್ತಲಲ್ಲಿರುವ ನದಿಯಲ್ಲಿ ಐದಾರು ಮೊಸಳೆಗಳನ್ನು ನಾವು ಕಂಡಿದ್ದೇವೆ. ಇದುವರೆಗೂ ಅವು ಯಾರಿಗೂ ತೊಂದರೆ ಮಾಡಿಲ್ಲ. ಆದರೆ, ಇದೇ ಮೊದಲ ಬಾರಿ ದಡದಲ್ಲಿದ್ದ ಪಾರಿವಾಳವನ್ನು ಕಣ್ಣೆದುರೇ ಎಳೆದೊಯ್ದಿರುವುದು ಆತಂಕ ಮೂಡಿಸಿದೆ. ಮಕ್ಕಳು ಈ ಸ್ಥಳದಲ್ಲಿಯೇ ಈಜುವುದು, ಸ್ನಾನ ಮಾಡುವುದು ಮಾಡುತ್ತಾರೆ. ರೈತರು ದನ, ಕರುಗಳನ್ನು ತೊಳೆಯುತ್ತೇವೆ ಎಂದು ಅರುಣ್ ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ: ಹಳ್ಳಿಗೆ ನುಗ್ಗಿದ ಚಿರತೆ, 7 ಜನರ ಮೇಲೆ ದಾಳಿ: ಮನಬಂದಂತೆ ದೊಣ್ಣೆಗಳಿಂದ ಹೊಡೆದ ಜನರು-ವಿಡಿಯೋ - Leopard Attack

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.